Sunday, January 19, 2025

ಚಂದ್ರಯಾನ-3 ಸಕ್ಸಸ್ : ಕೊನೆಗೂ ನಿಜವಾಯ್ತು ಕೋಡಿಶ್ರೀ ಭವಿಷ್ಯ

ಹಾಸನ : ಚಂದ್ರಯಾನ-3 ಹಾಗೂ ಇಸ್ರೋ ಕುರಿತು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ ಭವಿಷ್ಯ ನಿಜವಾಗಿದೆ.

ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿರುವ ಕೋಡಿಮಠದಲ್ಲಿ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.

ಇದು ಭಾರತೀಯ ಪರಂಪರೆಗೆ, ದೈವ ಶಕ್ತಿಗೆ ಸಂದ ಜಯ. ಚಂದ್ರಯಾನ-3 ಯಶಸ್ವಿಯಾಗಿರುವುದು ಅಖಂಡ ಜಗತ್ತಿಗೆ ಒಂದು ಮಾದರಿ. ಇದು ಭಾರತ ದೇಶದ ಪ್ರಜೆಗಳು ನಂಬಿರುವ ದೈವ ಶಕ್ತಿಯ ಪ್ರತೀಕ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸಲಾಂ..! ಚಂದ್ರಯಾನ-3ಕ್ಕೆ ದಿಗ್ವಿಜಯ

ದೈವದ ಮೇಲೆ ನಂಬಿಕೆ ಇಟ್ರೆ ಸೋಲಾಗಲ್ಲ

ಚಂದ್ರಯಾನ-3 ಯಶಸ್ವಿಯಾಗುತ್ತೆ ಅಂತ ಬೆಳಗಾವಿಯಲ್ಲಿ ಹೇಳಿದ್ದೆ. ಪ್ರಾಚೀನ ಕಾಲದಿಂದಲೂ ಭಾರತೀಯರು ದೇವರು, ಧರ್ಮ, ಸತ್ಯ, ನಂಬಿಕೆಗಳಲ್ಲಿ ವಿಶ್ವಾಸವಿಟ್ಟು ಉಸಿರಾಗಿಸಿಕೊಂಡು ಬಾಳಿರುವವರು. ಹಾಗಾಗಿ, ದೈವದ ಮೇಲೆ, ಧರ್ಮದ ಜೀವನದ ಮೇಲೆ ನಂಬಿಕೆ ಇಟ್ಟಂತಹ ವ್ಯಕ್ತಿಗೆ ಎಂದು ಸೋಲಾಗಾವುದಿಲ್ಲ ಎಂದು ನುಡಿದಿದ್ದಾರೆ.

RELATED ARTICLES

Related Articles

TRENDING ARTICLES