Saturday, June 1, 2024

ಚಂದ್ರಯಾನ- 3ಗೆ 615 ಕೋಟಿ ರೂ. ಖರ್ಚು

ಬೆಂಗಳೂರು : ಭಾರತ ಸರ್ಕಾರ ಚಂದ್ರಯಾನ- 3ಗೆ ಒಟ್ಟು 615 ಕೋಟಿ ರೂಪಾಯಿ ಹಣ ಖರ್ಚು ಮಾಡಿದೆ.

ಉಪಗ್ರಹದ ಒಳ ಭಾಗದದಲ್ಲಿ ಜೋಡಿಸಲಾಗಿರುವ ವಿಕ್ರಮ್​ ಮತ್ತು ಪ್ರಗ್ಯಾನ್​, ಪ್ರಪೋಲ್ಷನ್​ಗೆ 250 ಕೋಟಿ ಖರ್ಚು ಮಾಡಲಾಗಿದೆ. ಇನ್ನು ಉಪಗ್ರಹ ಉಡಾವಣೆಗಾಗಿಯೇ 365 ಕೋಟಿ ರೂಪಾಯಿ ಹಣ ಖರ್ಚಾಗಿದೆ. ಒಟ್ಟಾರೆ ಭಾರತೀಯರ ಕನಸಿನ ಚಂದ್ರಯಾನ -3ಗೆ 615 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.

ಚಂದ್ರಯಾನ-3 ಯೋಜನೆಯ ಹಿಂದೆ ವಿಜ್ಞಾನಿಗಳ ಶ್ರಮವಿದ್ದು, ಹಗಲು-ರಾತ್ರಿಯೆನ್ನದೇ ಚಂದ್ರಯಾನ-3ಕ್ಕೆ ದುಡಿದಿದ್ದಾರೆ. ಇನ್ನು ಈ ಯೋಜನೆಯ ಹಿಂದೆ ಪ್ರಮುಖವಾಗಿ ಐದು ಜನ ವಿಜ್ಞಾನಿಗಳಿದ್ದಾರೆ. ಎಸ್.ಸೋಮನಾಥ್ ಭಾರತದ ಚಂದ್ರಯಾನ ಮಿಷನ್ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು.

ಪಿ. ವೀರಮುತ್ತುವೇಲ್ ಯೋಜನಾ ನಿರ್ದೇಶಕ

ಇವರು ಕಳೆದ ವರ್ಷದ ಜನವರಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಂಡರು. ಇವರು ಚಂದ್ರಯಾನ-3ರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪಿ. ವೀರಮುತ್ತುವೇಲ್ ಚಂದ್ರಯಾನ-3 ಯೋಜನಾ ನಿರ್ದೇಶಕರಾಗಿದ್ದಾರೆ. ಇನ್ನು VSSC ನಿರ್ದೇಶಕ ಎಸ್. ಉನ್ನಿಕೃಷ್ಣನ್‌ ನಾಯರ್, URSC ನಿರ್ದೇಶಕ ಎಂ. ಶಂಕರನ್‌, ಉಡಾವಣಾ ಅಧಿಕಾರ ಮಂಡಳಿ ಮುಖ್ಯಸ್ಥ ಎ. ರಾಜರಾಜನ್​​ ಈ ಯೋಜನೆ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

RELATED ARTICLES

Related Articles

TRENDING ARTICLES