ಬೆಂಗಳೂರು : ನಾನು ಯಾರಿಗೂ ಹೆದರಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತೀಕ್ಷ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ ಶಿವಕುಮಾರ್ ಅವರು ದೆಹಲಿಯ ಬಿಜೆಪಿ ನಾಯಕರನ್ನು ಬೇಕಾದ್ರೂ ಕೊಂಡುಕೊಳ್ತಾರೆ. ದೇವೇಗೌಡರ ಕುಟುಂಬ ಒಂದನ್ನು ಬಿಟ್ಟು ಯಾರನ್ನು ಬೇಕಾದ್ರೂ ಕೊಂಡುಕೊಳ್ಳುವ ಶಕ್ತಿ ಅವರಿಗಿದೆ ಎಂದು ಕುಟುಕಿದ್ದಾರೆ.
ನೈಸ್ ಅಕ್ರಮದ ದಾಖಲೆಗಳನ್ನು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡ್ತೀನಿ. ನಾಳೆ ನಮ್ಮ ವಿಜ್ಞಾನಿಗಳ ಮಹತ್ವದ ಚಂದ್ರಯಾನ-3ಯ ಅಂತಿಮ ಘಟ್ಟ ಇದೆ. ಎಲ್ಲರ ಗಮನ ಆ ಕಡೆ ಇರುತ್ತೆ. ಹಾಗಾಗಿ, ಇದೆಲ್ಲ ಮುಗಿದ ಬಳಿಕ ದಾಖಲೆ ಬಿಡುಗಡೆ ಮಾಡುವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಾಣ ಕೊಡುವ ಕಾರ್ಯಕರ್ತರು
ನಮ್ಮ ಯಶವಂತಪುರ ಕಾರ್ಯಕರ್ತರನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಾ ಇದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮ ಕಾರ್ಯಕರ್ತರ ಸೆಳೆಯುವ ಪ್ರಯತ್ನ ಮಾಡ್ತಾ ಇದಾರೆ. ಇಲ್ಲಿ ನಮ್ಮ ಪಕ್ಷಕ್ಕೆ ಪ್ರಾಣ ಕೊಡುವ ಕಾರ್ಯಕರ್ತರು ಇದ್ದಾರೆ. ಆ ಹಿನ್ನಲೆ ಯಲ್ಲಿ ಇವತ್ತು ಸಭೆ ನಡೆಸಲಾಗ್ತಿದೆ. ನಾಳೆಯೇ ಉಪ ಚುನಾವಣೆ ಬಂದುಬಿಡುತ್ತೆ ಎಂಬ ಭಾವನೆ ನಮ್ಮಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಸಿಎಂಗೆ ಸಲಹೆ ಕೊಡ್ತೀನಿ..!
ಸಿಎಂಗೆ ಸಲಹೆ ಕೊಡ್ತೀನಿ.. ರಾಜ್ಯದ ಜನಕ್ಕೆ ಒಳ್ಳೆಯದು ಮಾಡಬೇಕು ಅನ್ನೋದಿದ್ರೆ, ನೈಸ್ಗೆ ಕೊಟ್ಟ ಭೂಮಿಯನ್ನು ವಾಪಸ್ ಪಡೆಯಲಿ. ಸಿಂಗೂರಿನಲ್ಲಿ (ವೆಸ್ಟ್ ಬೆಂಗಾಲ್) ಈ ರೀತಿಯ ರೈತರಿಗೆ ವಾಪಸ್ ಕೊಟ್ಟಂತೆ ಕೊಡಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.