Monday, May 20, 2024

ಚಲಿಸುತ್ತಿದ್ದ ಬಸ್​ನಿಂದ ಕಳಚಿ ಬಿದ್ದ ಚಕ್ರ

ಗದಗ : ಶಕ್ತಿ ಯೋಜನೆ ಎಫೆಕ್ಟ್​ನಿಂದ ಬಸ್ ಫುಲ್ ರಷ್ ಆಗಿದ್ದು, ಬಸ್​ನಿಂದ ಕಳಚಿ ಬಿದ್ದ ಹಿಂದಿನ ಚಕ್ರ ಘಟನೆ ತಾಲೂಕಿನ ಹೊಂಬಳ ಗ್ರಾಮದ ಬಳಿ ನಡೆದಿದೆ.

ಗದಗ ಡಿಪೋಗೆ ಸೇರಿದ KSRTC ಬಸ್​ವೊಂದು ನಿನ್ನೆ ನರಗುಂದಕ್ಕೆ ಹೋಗುತ್ತಿದ್ದು, 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್. ಈ ವೇಳೆ ಬಸ್​ನ ಹಿಂದಿನ ಚಕ್ರವೊಂದು ಕಳಚಿ ಬಿದ್ದಿದೆ. ತಕ್ಷಣ ಚಾಲಕ ಸಮಯ ಪ್ರಜ್ಞೆಯಿಂದ ಗಾಲಿ ಬಿಚ್ಚಿ ಬೀಳುತ್ತಿದ್ದಂತೆ ಬಸ್ ನಿಲ್ಲಿಸಿದ್ದಾನೆ.

ಇದನ್ನು ಓದಿ : USA ಯಲ್ಲಿ ದಾವಣಗೆರೆ ಮೂಲದ ದಂಪತಿ,ಮಗು ಸಾವು; ಮೃತದೇಹ ತರಿಸಲು ತಾಯಿ ಮನವಿ

ಚಕ್ರ ಕಳಚಿ ಬಿದ್ದಿದ್ದನು ಕಂಡು ದಿಗ್ಬ್ರಾಂತಗೊಂಡ ಪ್ರಯಾಣಿಕರು.

ಬಸ್​ನಲ್ಲಿ ಶಾಲಾ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಚಾಲಕನ ಸಮಯ ಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು. ಬಸ್ ಹಿಂದೆ ಹೋಗ್ತಿದ್ದ ಖಾಸಗಿ ವಾಹನಗಳಲ್ಲಿ ಕುಳಿತವರಿಂದ ವಿಡಿಯೋ ಸೆರೆಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

RELATED ARTICLES

Related Articles

TRENDING ARTICLES