Thursday, January 23, 2025

ವೈದ್ಯನ ನಿರ್ಲಕ್ಷದಿಂದ ಅಮಾಯಕ ಯುವಕ ಬಲಿ

ಬೆಂಗಳೂರು : ವೈದ್ಯನ ನಿರ್ಲಕ್ಷದಿಂದ ಅಮಾಯಕ ಯುವಕ ಬಲಿಯಾಗಿದ್ದಾನೆ ಘಟನೆ ಮಾಗಡಿ ರಸ್ತೆಯ ಭಾಗ್ಯ ಕ್ಲೀನಕ್​ನಲ್ಲಿ ನಡೆದಿದೆ.

ಅಮರ್ ಶೆಟ್ಟಿ (31) ಮೃತಪಟ್ಟ ಯುವಕ. 13 ನೇ ತಾರೀಖು ಜ್ವರ ಬಂದ ಹಿನ್ನೆಲೆ ಭಾಗ್ಯ ಕ್ಲೀನಕ್​ಗೆ ತೆರಳಿದ್ದ ಯುವಕ. ಈ ವೇಳೆ ಜ್ವರಕ್ಕೇ ಇಂಜಕ್ಷನ್ ಕೊಟ್ಟಿದ್ದ ವೈದ್ಯ. ವೈದರು ಕೊಟ್ಟ ಇಂಜೆಕ್ಷನ್​ ಅಡ್ಡ ಪರಿಣಾಮದಿಂದ ಯುವಕನಿಗೆ ಮಲ್ಟಿ ಆರ್ಗನ್ ಡ್ಯಾಮೇಜ್ ಆಗಿದೆ.

ತಕ್ಷಣ ಯುವಕ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ದುರಾದೃಷ್ಟವಶಾತ್ ನಿನ್ನೆ (ಶುಕ್ರವಾರ) ಚಿಕಿತ್ಸೆ ಫಲಿಸದೆ ಅಮರ್ ಶೆಟ್ಟಿ ಸಾವನ್ನಪ್ಪಿದ್ದಾರೆ.

ಇದನ್ನು ಓದಿ : ಹಂದಿಗಳಿಗೆ ಆಫ್ರಿಕನ್​ ಜ್ವರ : ಎಲ್ಲಾ ಹಂದಿಗಳನ್ನು ಕೊಲ್ಲುವಂತೆ ಜಿಲ್ಲಾಡಳಿತ ಸೂಚನೆ!

ಅಮರ್ ಶೆಟ್ಟಿ ಕಳೆದ 1 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ಹೋಟೆಲ್ ಬಿಸಿನೆಸ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಆದ್ರೆ ಇಂದು ವೈದ್ಯನ ನಿರ್ಲಕ್ಷಕ್ಕೆ ಬಲಿಯಾಗಿದ್ದಾನೆ. ಸದ್ಯ ಭಾಗ್ಯ ಕ್ಲೀನಿಕ್​ನ ವೈದ್ಯನ ಮೇಲೆ ದೂರು ದಾಖಲಾಗಿದ್ದು, ಕೆಪಿ ಅಗ್ರಹಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES