Monday, May 20, 2024

ಇದೇ ನೋಡಿ ಚಂದ್ರನ ಮೇಲ್ಮೈನ ಮೊದಲ ಚಿತ್ರ

ಬೆಂಗಳೂರು : ಚಂದ್ರನ ಅಂಗಳಕ್ಕೆ ರಷ್ಯಾ ಕಳುಹಿಸಿರುವ ಲೂನಾ-25 ಚಂದ್ರನ ಕಕ್ಷೆ ಪ್ರವೇಶಿಸಿದ ನಂತರ ಚಂದ್ರನ ಮೇಲ್ಮೈನ  ಸೆರೆಹಿಡಿದ ಮೊದಲ ಚಿತ್ರವನ್ನು ಕಳುಹಿಸಿದೆ. ಈ ಕುರಿತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮಾಸ್ ಮಾಹಿತಿ ಹಂಚಿಕೊಂಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಝೀಮನ್ ಕುಳಿ ಚಿತ್ರವನ್ನು ತೆಗೆಯಲಾಗಿದೆ. ‘ಡಾರ್ಕ್ ಸೈಡ್’ ಎಂದೂ ಕರೆಯಲ್ಪಡುವ ಈ ಭಾಗವು ಚಂದ್ರನ ಅರ್ಧಗೋಳವಾಗಿದ್ದು, ಭೂಮಿಯ ನೋಟದಿಂದ ಶಾಶ್ವತವಾಗಿ ಮರೆಯಾಗಿದೆ. ಈ ಕುಳಿ ಭೂವೈಜ್ಞಾನಿಕವಾಗಿ ಕುತೂಹಲಕಾರಿ ತಾಣವಾಗಿದೆ.

ಹೊಸ ಚಿತ್ರಗಳು ಈ ಕುಳಿಯ ಬಗ್ಗೆ ಅಮೂಲ್ಯವಾದ ಹೆಚ್ಚುವರಿ ಮಾಹಿತಿ ಒದಗಿಸುತ್ತವೆ. ಸೋವಿಯತ್ ಒಕ್ಕೂಟದ ಲೂನಾ-3 ಬಾಹ್ಯಾಕಾಶ ನೌಕೆಯು ಅಕ್ಟೋಬರ್ 1959ರಲ್ಲಿ ಚಂದ್ರನ ಮೇಲ್ಮೈನ ಚಿತ್ರವನ್ನು ವಿಶ್ವದಲ್ಲೇ ಮೊದಲ ಬಾರಿಗೆ ರವಾನಿಸಿತ್ತು. ಲೂನಾ-25 ಮಿಷನ್ ಚಂದ್ರನ ಪರಿಶೋಧನೆಯ ಈ ಪರಂಪರೆಯನ್ನು ಮುಂದುವರಿಸಿದೆ.

RELATED ARTICLES

Related Articles

TRENDING ARTICLES