Thursday, December 19, 2024

ಶಿಕಾರಿಪುರದಲ್ಲಿ ಶಾಸಕ ವಿಜಯೇಂದ್ರರ ಕಚೇರಿ ಉದ್ಘಾಟನೆ

ಶಿವಮೊಗ್ಗ : ಶಿಕಾರಿಪುರ ಪಟ್ಟಣದ ಆಡಳಿತ ಸೌಧ ಕಟ್ಟಡದಲ್ಲಿ ಶಾಸಕ ಬಿ.ವೈ. ವಿಜಯೇಂದ್ರ ಅವರ ಕಚೇರಿಯನ್ನು ಉದ್ಘಾಟಿಸಲಾಯಿತು.

ಕೊಠಡಿ ನಂ.6ರಲ್ಲಿ ಶ್ರೀ ಲಕ್ಷ್ಮೀ ಹಾಗೂ ಶ್ರೀ ವಿಘ್ನೇಶ್ವರನ ಪೂಜೆಯೊಂದಿಗೆ ಶಾಸಕರ ಜನಸಂಪರ್ಕ ಕಚೇರಿಯನ್ನು ಆರಂಭಿಸಲಾಯಿತು.

ಈ ಕುರಿತು ಮಾತನಾಡಿರುವ ಶಾಸಕ ಬಿ.ವೈ. ವಿಜಯೇಂದ್ರ ಅವರು, ಜನಸೇವೆಯೇ ದೇವರ ಸೇವೆ, ಅದು ಪೂರ್ವಜನ್ಮದ ಸುಕೃತ. ಇಂದು ಆಡಳಿತ ಸೌಧದಲ್ಲಿ ತಾಲ್ಲೂಕಿನ ಜನತೆಯ ಕಷ್ಟಕಾರ್ಪಣ್ಯಗಳನ್ನು ಆಲಿಸಿ, ಉತ್ತಮ ಹಾಗೂ ಜನಸ್ನೇಹಿ ಆಡಳಿತ ನೀಡುವ ದೃಷ್ಟಿಯಿಂದ ಕಚೇರಿ ಪ್ರಾರಂಭಿಸಲಾಯಿತು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ಕ್ಷೇತ್ರದ ಹಾಗೂ ಜಿಲ್ಲೆಯ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES