Monday, December 23, 2024

ಅಪ್ರಾಪ್ತ ಮಗಳ ಮದುವೆ ಮಾಡುವಂತೆ ಗಂಡನಿಗೆ ಪಟ್ಟು ; ಮನನೊಂದು ಪತ್ನಿ ಆತ್ಮಹತ್ಯೆ

ಬೆಂಗಳೂರು : ಅಪ್ರಾಪ್ತೆ ಮಗಳನ್ನು ಮದುವೆ ಮಾಡುವಂತೆ ಗಂಡನಿಗೆ ಪಟ್ಟು ಹಿಡಿದಿದ್ದು, ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ ಘಟನೆ ಹೆಣ್ಣೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾಯುವ ಮುನ್ನ ಎರಡನೇ ಮಗಳ ಮದುವೆ ನೋಡಬೇಕು ಎಂಬ ಆಸೆಯಿಂದ, ಗಂಡನ ಬಳಿ ಪಟ್ಟು ಹಿಡಿದಿದ್ದ ಹಫೀಸ ಸುಲ್ತಾನ (42) ಆತ್ಮಹತ್ಯೆ ಮಾಡಿಕೊಂಡ ಪತ್ನಿ. ಅಪ್ರಾಪ್ತೆಗೆ ಮದುವೆ ಮಾಡಿದ್ರೆ ಜೈಲೂಟ ಗ್ಯಾರಂಟಿ ಎಂದು ನಿರಾಕರಿಸಿದ ಪತಿ ಸೈಯದ್. ಈ ಹಿನ್ನೆಲೆ ಮನನೊಂದ ಮಹಿಳೆ ನೇಣಿಗೆ ಶರಣಾಗಿದ್ದಾಳೆ.

ಇದನ್ನು ಓದಿ : 1.32 ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ!:ಅಕ್ರಮ ಮಾರಾಟ ಶಂಕೆ

ಹಫೀಸಗೆ ಮೊದಲ ಪತಿಯಿಂದ ವಿಚ್ಚೇದನ ನೀಡಲಾಗಿತ್ತು. ಬಳಿಕ 9 ವರ್ಷದ ಹಿಂದೆ ಸೈಯದ್ (34) ನನ್ನು ಮದುವೆಯಾಗಿದ್ದ ಹಫೀಸ. ಮೊದಲನೇ ಗಂಡನಿಂದ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.

ಬಳಿಕ ಕಳೆದ 6 ತಿಂಗಳ ಹಿಂದಷ್ಟೇ ಮೊದಲ ಮಗಳ ಮದುವೆ ಮಾಡಲಾಗಿತ್ತು, ಆದರೂ ಸಹ 16 ನೇ ವರ್ಷದ ಎರಡನೇ ಮಗಳಿಗೂ ವಿವಾಹ ಮಾಡುವಂತೆ ಒತ್ತಾಯಿಸುತ್ತಿದ್ದ ಮಹಿಳೆ. ಪತ್ನಿಯ ಮಾತಿಗೆ ಕಾನೂನು ಸಮಸ್ಯೆ ಎಂದು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಹೆಣ್ಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES