Monday, December 23, 2024

ಕಿಂಗ್​ ಫಿಷರ್​ ಬಿಯರ್​ನಲ್ಲಿ ಅಪಾಯಕಾರಿ ಕೆಮಿಕಲ್​ ಪತ್ತೆ: ಸರಬರಾಜು ನಿಲ್ಲಿಸುವಂತೆ ಸೂಚನೆ

ಮೈಸೂರು : ಮದ್ಯಪ್ರಿಯರಿಗೆ ಭಾರಿ ಆಘಾತಕರವಾದ ಸುದ್ದಿಯೊಂದು ಬಯಲಾಗಿದ್ದು, ಬಿಯರ್​ ನಲ್ಲಿ ರಾಸಾಯನಿಕ ಅಂಶ ಶೇಖರಣೆಯಾಗಿರುವ ಅಂಶವನ್ನು ಪ್ರಯೋಗಾಲಯ ಧೃಡಪಟ್ಟಿದೆ.

ಇದನ್ನೂ ಓದಿ: ಕೂಲಿ ಕಾರ್ಮಿಕನ ಕುಟುಂಬಸ್ಥರ ಮೇಲೆ ಮೇಸ್ತ್ರಿ ಹಲ್ಲೆ

ನಂಜನಗೂಡು ಯುನೈಟೆಡ್ ಬ್ರಿವರಿಸ್ ಘಟಕದಲ್ಲಿ 2023 ಜುಲೈ 15 ರಂದು ತಯಾರಾಗಿದ್ದ ಕಿಂಗ್​ ಫೀಷರ್​ ಬಿಯರ್‌ ನಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದೆ. ಈ ಕುರಿತು ಮಾಹಿತಿ ಬಂದ ಕೂಡಲೆ ಅಬಕಾರಿ ಇಲಾಖಾಧಿಕಾರಿಗಳು ಬಿಯರ್​ಗಳ ಸ್ಯಾಂಪಲ್​ಗಳನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ ಈ ವೇಳೆ ಬಿಯರ್​ನಲ್ಲಿ ಅಪಾಯಕಾರಿ ಕೆಮಿಕಲ್​ ಅಂಶ ಇರುವುದು ಧೃಡಪಟ್ಟಿದೆ.

ಬಿಯರ್​ನಲ್ಲಿ ರಾಸಾಯನಿಕ ಅಂಶ ಶೇಖರಣೆ ಬಗ್ಗೆ ಲ್ಯಾಬ್‌ನಲ್ಲಿ ದೃಢ ಬೆನ್ನಲ್ಲೇ ಅಂಗಡಿಗಳಿಗೆ ವಿತರಣೆ ಮಾಡದಂತೆ ಅಬಕಾರಿ‌ ಇಲಾಖೆ‌ಯಿಂದ ಸುತ್ತೋಲೆ ಹೊರಡಿಸಲಾಗಿದೆ.

RELATED ARTICLES

Related Articles

TRENDING ARTICLES