Monday, December 23, 2024

ಕುಖ್ಯಾತ ಹನಿಟ್ರ್ಯಾಪ್​ ಗ್ಯಾಂಗ್​ ಬಂಧನ!

ಬೆಂಗಳೂರು : ಪೋನ್​ ಮಾಡಿ ಕೆಡ್ಡಕ್ಕೆ ಬೀಳಿಸಿಕೊಂಡು ಲಕ್ಷಾಂತರ ಹಣ ಸುಲಿಗೆ ಮಾಡುತ್ತಿದ್ದ ಕುಖ್ಯಾತ ಹನಿಟ್ರ್ಯಾಪ್​ ಗ್ಯಾಂಗ್​ ನ್ನು ಜಯನಗರ ಪೊಲೀಸರು ಅರೆಸ್ಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಣ್ಣಮ್ಮ ಹಾಗೂ ಸ್ನೇಹ ಬಂಧಿತ ಆರೋಪಿಗಳು, ಸುಧೀಂದ್ರ ಎಂಬುವರಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದ ಆರೋಪಿಗಳು, ಮೊದಲಿಗೆ ಕಷ್ಟ ಅಂತ ಸುಧೀಂದ್ರ ಬಳಿ ಐದು ಸಾವಿರ ಹಣ ಪಡೆದಿದ್ದ ಅಣ್ಣಮ್ಮ. ಬಳಿಕ ಸುಧೀಂದ್ರ ಬಳಿ ಸಲುಗೆ ಬೆಳೆಸಿ ಓಯೋ ರೂಂಗೆ ಕರೆಸಿಕೊಂಡಿದಳು ಅಲ್ಲಿ ಸುಧೀಂದ್ರ ಜೊತೆ ದೈಹಿಕ ಸಂಬಂಧ ಬೆಳೆಸಿ‌ ಅದನ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಳು,

ಇದನ್ನೂ ಓದಿ: ದೇಶ ವಿಭಜಿಸಿದವರು ಭಾರತ ಜೋಡೊ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ : ಬೊಮ್ಮಾಯಿ

ದುರಾಸೆಗೆ ಬಿದ್ದ ಅಣ್ಣಮ್ಮ, ಅದೇ ವಿಡಿಯೋ ಬಳಸಿಕೊಂಡು ಸಂಬಂಧಿಕರು ಹಾಗೂ ಸ್ನೇಹಿತರಿಗೆ ವಿಡಿಯೋ ವಾಟ್ಸಾಪ್ ಮಾಡೋದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿಳು, ಅಣ್ಣಮ್ಮ ಮಾತ್ರವಲ್ಲದೇ ಆಕೆಯ ಸ್ನೇಹಿತೆ ಸ್ನೇಹ ಎಂಬಾಕೆಯಿಂದಲೂ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿ ಒಟ್ಟು 82 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದ ಕಿಲಾಡಿಗಳು.

ಇವರ ಕಾಟ ಸಹಿಸಲಾಗದೇ ಜಯನಗರ ಪೊಲೀಸ್ ಠಾಣೆಗೆ ನಿವೃತ್ತ ಸರ್ಕಾರಿ ಅಧಿಕಾರಿ ಸುಧೀಂದ್ರ. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಜಯನಗರ ಪೊಲೀಸರು, ಸದ್ಯ ಆರೋಪಿಗಳನ್ನ ಬಂಧಿಸಿ‌ ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES