Monday, December 23, 2024

ಎಣ್ಣೇ ಏಟಲ್ಲಿ ಯುವಕರ ಹುಚ್ಚಾಟ ; ಸ್ಥಳೀಯರ ಆಕ್ರೋಶ

ಬೆಂಗಳೂರು : ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಯುವಕರ ಹುಚ್ಚಾಟ ನೆಡೆದಿದ್ದು, ಪಬ್ ಮುಂದೆ ಬಡಿದಾಟ ನೆಡೆಸಿರುವ ಘಟನೆ ನಗರದ ಕ್ಚೀನ್ಸ್ ರಸ್ತೆಯಲ್ಲಿ ನಡೆದಿದೆ.

ಎಣ್ಣೆ ಏಟಲ್ಲಿದ್ದ ಯುವಕರ ಜಗಳ ಬಿಡಿಸಲು ಸ್ಥಳೀಯರು ಹರಸಾಹಸವನ್ನೇ ಪಡಬೇಕಾಯಿತು. ಕ್ಚೀನ್ಸ್ ರಸ್ತೆಯಲ್ಲಿ ಮಧ್ಯರಾತ್ರಿ 11 ಗಂಟೆಯಲ್ಲಿ ನಡೆದಿದ್ದ ಘಟನೆಯಿಂದ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪುಂಡರ ಜಗಳವನ್ನು ತಡೆಯಲು ಬೌನ್ಸರ್​​ಗಳಿಂದಲೂ ಸಹ ಸಾಧ್ಯವಾಗಲಿಲ್ಲ.

ಇದನ್ನು ಓದಿ : ಹೃದಯಾಘಾತದಿಂದ ಮೃತಪಟ್ಟ ನರ್ಸಿಂಗ್ ವಿದ್ಯಾರ್ಥಿನಿ

ಕುಡಿದ ಮತ್ತಿನಿಂದ ಅಸಭ್ಯವಾಗಿ ವರ್ತಿಸಿ, ವಾಹನಗಳು ಸಂಚರಿಸುತ್ತಿದ್ದ ರಸ್ತೆ ಮಧ್ಯದಲ್ಲಿ ನಿಂತು ಕಿತ್ತಾಡುತ್ತಿದ್ದರು. ಯುವಕರ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES