Monday, December 23, 2024

ನೂತನ ಗ್ರಾ.ಪಂ. ಅಧ್ಯಕ್ಷನಿಗೆ ಬಿಯರ್​ ಅಭಿಷೇಕ!

ಕೋಲಾರ : ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಬೆಂಬಲಿಗರಿಂದ ಮದ್ಯದ ಅಭಿಷೇಕ ಮಾಡಿದ ಘಟನೆ ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: Power Impact : ಪವರ್ ಟಿವಿ ವರದಿ ಬಳಿಕ ಕಸದ ಡಬ್ಬಿಗಳ ಹಂಚಿಕೆ

ರಾಜ್ಯದ ಹಲವು ಗ್ರಾಮಪಂಚಾಯ್ತಿಗಳಿಗೆ ಎರಡನೇ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಕೋಲಾರದ ತೊಟ್ಲಿ ಗ್ರಾಮಪಂಚಾಯ್ತಿ ಇತ್ತೀಚೆಗೆ ಚುನಾವಣೆ ನಡೆಯಿತು, ಈ ಚುನಾವಣೆಯಲ್ಲಿ ಮಂಜುನಾಥ್​ ಎಂಬುವವರು ಆಯ್ಕೆಯಾಗಿದ್ದರು,

ಗೆದ್ದ ಖುಷಿಯಲ್ಲಿ ಮಂಜುನಾಥ್​ ಬೆಂಬಲಿಗರು ನೂತನ ಅಧ್ಯಕ್ಷನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದಾರೆ, ಈ ವೇಳೆ ಬಿಯರ್​ ಬಾಟಲ್​ಗಳನ್ನು ಹಿಡಿದು ಬಿಯರ್​ನಿಂದ ಅಭಿಷೇಕ ಮಾಡಿ ಖುಷಿ ಪಟ್ಟಿದ್ದಾರೆ.

ಮಂಜುನಾಥ್​ರಿಗೆ ಬಿಯರ್ ಅಭಿಷೇಕ ಮಾಡಿದ ವೀಡಿಯೋಗಳು ಸಾಮಾಜಿಕ ಜಾಲತಾನಗಳಲ್ಲಿ ವೈರಲ್​ ಆಗಿದ್ದು, ಬೆಂಬಲಿಗರ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES