Thursday, December 26, 2024

ಪೈಗಂಬರ್​ ಅವಹೇಳನ ಮಾಡಿದವರ ತಲೆ ತೆಗೆಯಿರಿ ಎಂದ ಯುವಕರ ಬಂಧನ!

ಯಾದಗಿರಿ : ಮಹ್ಮದ್ ಪೈಗಂಬರ್ ಬಗ್ಗೆ ಅವಹೇಳನ ಮಾಡಿದವರ “ತಲೆ ತೆಗಿರಿ” ಎಂಬ ರಿಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಇಬ್ಬರು ಯುವಕರನ್ನು ಯಾದಗಿರಿ ಪೊಲೀಸ್​ ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಶಪಥವನ್ನು ಕೈಗೊಳ್ಳಬೇಕು : ಸಿಎಂ ಕರೆ

ಅಕ್ಬರ್ ಸೈಯದ್ ಬಹದ್ದೂರ್ (23) ಹಾಗೂ ಎಂ.ಡಿ ಅಯಾಜ್ (21) ಬಂಧಿತ ಯುವಕರು, ಯಾದಗಿರಿ ನಗರದ ನಿವಾಸಿಗಳಾದ ಈ ಆರೋಪಿಗಳು, ಪೈಗಂಬರ್​ ವಿರುದ್ದ ಅವಹೇಳನ ಮಾಡಿದವರ ತಲೆ ತೆಗೆಯಿರಿ ಎಂಬ ವಿಡಿಯೋ ರೀಲ್ಸ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬಳಿಕ, ಪ್ರಧಾನಿ ಮೋದಿಗೆ ಟ್ಯಾಗ್​ ಮಾಡಿದ್ದರು, ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್​ ಆಗಿತ್ತು.

ಈ ವಿಡಿಯೋದಲ್ಲಿ “ನಾವು ಅಹಿಲೇ ಸುನ್ನತೆ ಜಮಾತ್ ನವರಿದ್ದೆವೆ ಗೆಳೆಯರೆ, ನಮಗೆ ಬಾಲ್ಯದಿಂದ ಇದನ್ನೇ ಕಲಿಸಿಕೊಡಲಾಗಿದೆ. ಜೀವನದಲ್ಲಿ ಎಲ್ಲಾ ಕಷ್ಟವನ್ನ ಎದುರಿಸಿ. ಆದ್ರೆ, ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ್ರೆ ಅವರ ದೇಹದಿಂದ ರುಂಡವನ್ನ ಬೇರ್ಪಡಿಸಿ. ಯುವತಿರನ್ನ ಬುಟ್ಟಿಗೆ ಹಾಕಿಕೊಂಡು ಗಂಡಸು ಎಂದುಕೊಳ್ಳುವವರೆ ಗಂಡಸೇ ಆಗಿದ್ರೆ ಮೈದಾನಕ್ಕೆ ಬನ್ನಿ 15 ನಿಮಿಷದಲ್ಲಿ.

ಮುಸ್ಲಮಾನರ ಮೇಲೆ ದೌರ್ಜನ್ಯ ಎಸಗುವವರೆ. ಮುಸ್ಲಿಮರನ್ನೇ ಟಾರ್ಗೆಟ್ ಮಾಡುವವರೆ.ಎಷ್ಟು ಹಾರಾಡ್ತಿರಾ ಹಾರಾಡಿ ಈ ಜಗತ್ತಿನಲ್ಲಿ. ಖರಾನ್ ಬಹಳ ಸ್ಪಷ್ಟವಾಗಿ ಹೇಳ್ತಾಯಿದೆ‌ ಕಾಫಿರ್ (ಹಿಂದೂ) ಕೊನೆಗೆ ನಿಮ್ಮ ಸ್ಥಾನ ನರಕ” ಎಂದು ವೀಡಿಯೊ ರೆಕಾರ್ಡ್​ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಪ್ರಧಾನಿಗಳಿಗೆ ಟ್ಯಾಗ್ ಮಾಡಿದ್ದರು.

ಸದ್ಯ ಈ ಇಬ್ಬರು ಯುವಕರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಸೆಕ್ಷನ್ 153,505/2 ಅಡಿಯಲ್ಲಿ ಕೇಸ್ ದಾಖಲಿಸಿದ ಇಬ್ಬರನ್ನ ಬಂಧಿಸಲಾಗಿದೆ.‌

RELATED ARTICLES

Related Articles

TRENDING ARTICLES