Sunday, January 19, 2025

ವಿಜಯ್​ ರಾಘವೇಂದ್ರರನ್ನು ಬಿಗಿದಪ್ಪಿ ಸಾಂತ್ವನ ಹೇಳಿದ ನಟ ಯಶ್​!

ಬೆಂಗಳೂರು: ನಟ ವಿಜಯ್​ ರಾಘವೇಂದ್ರರನ್ನು ಸುಧೀರ್ಘವಾಗಿ ಅಪ್ಪಿಕೊಂಡ ನಟ ಯಶ್​ ಸಾಂತ್ವನ ಹೇಳಿ ಧೈರ್ಯ ಹೇಳಿದರು.

ಇದನ್ನೂ ಓದಿ: ನಾಳೆ ಜೈಲರ್​ ಸಿನಿಮಾ ಬಿಡುಗಡೆ: ಉದ್ಯೋಗಿಗಳಿಗೆ ರಜೆ ಜೊತೆಗೆ ಫ್ರೀ ಟಿಕೆಟ್​ ನೀಡಿದ ಕಂಪೆನಿ!

ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಬಿ.ಕೆ ಶಿವರಾಮ್​ ನಿವಾಸದ ಬಳಿ ವ್ಯವಸ್ಥೆ ಕಲ್ಪಿಸಿದ್ದು ಚಿತ್ರಂಗದ ಹಲವು ಗಣ್ಯರು  ಸೇರಿದಂತೆ ಸಂಬಂಧಿಕರು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಈ ವೇಳೆ ಸ್ಪಂದನಾ ಅಂತಿಮ ದರ್ಶನಕ್ಕೆ ಬಂದ ನಟ ಯಶ್,​ ಬಾವುಕರಾಗಿದ್ದ ವಿಜಯ್​ ರಾಘವೇಂದ್ರರನ್ನು ಸುಧೀರ್ಘವಾಗಿ ಅಪ್ಪಿಕೊಂಡ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಇದೇ  ವೇಳೆ ನಟಿ ರಕ್ಷಿತಾ, ಅನುಪ್ರಭಾಕರ್ ಕೂಡ ಸಾಂತ್ವನ ಹೇಳಿದರು.

ಸ್ಯಾಂಡಲ್​ವುಡ್​ನ ಅನಿರುದ್ದ್​, ನಟಿ ರಕ್ಷಿತ, ಪ್ರಿಯಾಂಕ ಉಪೆಂದ್ರ, ನಿರ್ದೇಶಕ, ಪ್ರೇಮ್​, ಕಿರುತೆರೆ ನಟ ನಟಿಯರು ಸೇರಿದಂತೆ ಹಲವರು ಬಿ.ಕೆ ಹರಿಪ್ರಸಾದ್​ ನಿವಾಸಕ್ಕೆ ಭೇಟಿ ನೀಡಿ ಸ್ಪಂದನಾ ಪಾರ್ಥೀವ ಶರೀರ ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಿದರು.

ಕಳೆದ ಎರಡು ದಿನಗಳ ಹಿಂದೆ ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ಮಲಗಿದ್ದಲ್ಲೆ ಕೊನೆಯುಸಿರೆಳಿದ್ದರು, ಸ್ಪಂದನಾರ ಮೃತ ದೇಹ ಮರಣೋತ್ತರ ಪರೀಕ್ಷೆ ಮತ್ತು ​ ಕಸ್ಟಮ್ಸ್​ ಪ್ರಕ್ರಿಯೆ ಮುಗಿಸಿ  ಮಂಗಳವಾರ ರಾತ್ರಿ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ಕರೆತರಲಾಯಿತು.

ಇಂದು ಅಂತಿಮ ದರ್ಶನಕ್ಕೆ ಇಡಲಾಗಿದ್ದು ಸಂಜೆ ವೇಳೆಗೆ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಲು ಕುಟುಂಬ ಸದಸ್ಯರು ಸಿದ್ದತೆ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES