Sunday, May 19, 2024

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 25-45 ದಿನದೊಳಗೆ ಬಿಲ್ : ಡಿ.ಕೆ ಶಿವಕುಮಾರ್

ಬೆಂಗಳೂರು : ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಕಾಮಗಾರಿಗಳ ಬಿಲ್ 25 ದಿನ, 40 ದಿನದೊಳಗೆ ಬಿಡುಗಡೆ ಆಗಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಿಂದಿನ ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ಮಾಡಲು ನನ್ನ ತಕರಾರು ಇಲ್ಲ. ಆದರೆ, ಕೆಲ ಕಾಮಗಾರಿಗಳ ಬಿಲ್‌ಗಳು ಅನುಮಾನ ಮೂಡಿಸುವಂತಿವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರು ಇರುವ ಕಡೆ ಹತ್ತು ಕೋಟಿ ಕಾಮಗಾರಿಗಳ ಬಿಲ್ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಕಾಮಗಾರಿಗಳ ಬಿಲ್ 25 ದಿನ, 40 ದಿನದೊಳಗೆ ಬಿಡುಗಡೆ ಆಗಿವೆ. ಆದ್ದರಿಂದ ನಾನು ತನಿಖೆ ಮಾಡಿಸುತ್ತಿದ್ದೇನೆ. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ಬಿಲ್‌ಗಳು ಬಿಡುಗಡೆ ಮಾಡಲ್ಲ ಎಂದು ಹೇಳಿದ್ದಾರೆ.

ಪೊಲಿಟಿಕಲ್ ಪ್ರಜರ್ ಕ್ರಿಯೇಟ್

ಯಾವ ಕಾಮಗಾರಿಗಳು ಸರಿಯಾಗಿ ನಡೆದಿವೆ. ಅಂತಹ ಬಿಲ್​​ಗಳನ್ನು ಬಿಡುಗಡೆ ಮಾಡಿಸೋಣ. ಈಗ ಪೊಲಿಟಿಕಲ್ ಪ್ರಜರ್ ಕ್ರಿಯೇಟ್ ಮಾಡಲು ನೋಡುತ್ತಿದ್ದಾರೆ ಅಷ್ಟೇ. ಆದಷ್ಟು ಬೇಗ ತನಿಖೆ ಮುಗಿಸಿ, ವರದಿ ತರಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES