Wednesday, January 22, 2025

ಬೇಲ್​ಗಾಗಿ ವಕೀಲರನ್ನೇ ಕಿಡ್ನ್ಯಾಪ್ ಮಾಡಿದ ಪುಂಡರು

ಬೆಂಗಳೂರು : ಜಾಮೀನು ಕೊಡಿಸಲು ವಕೀಲರನ್ನೇ ಕಿಡ್ನ್ಯಾಪ್ ಮಾಡಿರುವ ಘಟನೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೈಲಿನಲ್ಲಿರುವ ತಮ್ಮ 8 ಜನರಿಗೆ ಬೇಲ್ ಮಾಡಿಸಬೇಕು ಹಾಗೂ ಐದು ಲಕ್ಷ ಹಣ ತಂದುಕೊಡುವಂತೆ ರೌಡಿ ಶೀಟರ್ ರಾಜೇಶ್ ಅಲಿಯಾಸ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಹಾಗೂ ಜೌನ್,ಭರತ ಸೇರಿದಂತೆ ವಕೀಲ ಗಿರಧರ್ ಹಲ್ಲೆಗೆ ಒಳಗಾದ ವ್ಯಕ್ತಿ, ಎಂಬುವವರ ಮೇಲೆ ಹಲ್ಲೆ ಮಾಡಿದ ಪುಂಡರು.

ಹರ್ಷಿತ್ ಅಲಿಯಾಸ್ ಆಪಲ್ ಆ್ಯಂಡ್ ಗ್ಯಾಂಗ್ ನಿಂದ ವಕೀಲರ ಕಾರಿನಲ್ಲೇ ಕಿಡ್ನ್ಯಾಪ್ ಮಾಡಿದ ರೌಡಿಶೀಟರ್ ಗಳು, ಕಿಡ್ನ್ಯಾಪ್ ಮಾಡಿದ ಪುಂಡರು ವಕೀಲರ ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿಯೇ ಕೂರಿಸಿ ಇಡೀ ರಾತ್ರಿ ಕಾರಿನ ಜಾಕ್ ರಾಡ್ ಮತ್ತು ಸ್ಪಾನರ್ ನಿಂದ ಹಲ್ಲೇ ನಡೆಸಿರುವ ಆರೋಪಿಗಳು.

ಇದನ್ನುಓದಿ : ಪತ್ನಿ ಬೆರಳನ್ನೇ ಕಚ್ಚಿ ತಿಂದ ಸೈಕೋ ಪತಿ!

ಬೆಳಗಿನ ಜಾವದವರೆಗೂ ಹಲ್ಲೆ ನಡೆಸಿ 10 ಸಾವಿರ ಹಣ ಕಿತ್ತ ರೌಡಿಗಳು.

ಬಳಿಕ ಪೋಲಿಸರಿಗೆ ಸುಳಿವು ಕೊಟ್ಟರೆ ಅಥವಾ ಹಣ ಕೊಡದಿದ್ದರೆ, ಹುಡುಗರನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಬೆದರಿಸಿದ್ದಾರೆ. ಪುಂಡರ ಬೆದರಿಕೆಗೆ ಜಗ್ಗದ ವಕೀಲ ಗಿರಿಧರ್, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ದೂರಿನನ್ವಯ ಮೂವರು ಆರೋಪಿಗಳನ್ನು ಬಂಧಿಸಿದ ಪೋಲಿಸರು.

RELATED ARTICLES

Related Articles

TRENDING ARTICLES