ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ರಾಜ್ಯಾದ್ಯಂತ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶದಲ್ಲಿ ನಮ್ಮ ಬೆಸ್ಕಾಂ ಸಿಬ್ಬಂದಿಗಳು ಗ್ರಾಹಕರಿಗೆ ‘0’ ಬಿಲ್ ನೀಡುತ್ತಿದ್ದು ಜನರು ಸಂತನ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ, ವೈಯಕ್ತಿಕವಾಗಿ ನಮಗೂ ಕೂಡ ಕರೆ ಮಾಡಿದ ಹಲವು ಗ್ರಾಹಕರು ಝೀರೋ ಬಿಲ್ ಕಂಡು ಖುಷಿಯಾಗಿದೆ ಎಂದು ತಿಳಿಸಿದ್ದಾರೆ ಎಂದು ಬೆಸ್ಕಾಂ ಎಂಡಿ ಮಹಂತೇಶ್ ಬೀಳಗಿ ಹೇಳಿದರು.
ಇದನ್ನೂ ಓದಿ: ಎಗ್ ರೈಸ್ ತಿನ್ನಲು ಬಂದವರ ಮೇಲೆ ಬಿತ್ತು ನೀರಿನ ಟ್ಯಾಂಕ್: ಇಬ್ಬರ ದಾರುಣ ಸಾವು!
ಈ ಕುರಿತು ನಗರದ ಬೆಸ್ಕಾಂ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಆದೇಶ ಸ್ಪಷ್ಟವಾಗಿದ್ದು ಇದರಲ್ಲಿ ಯಾವುದೇ ಗೊಂದಲ ಬೇಡ, ಆದೇಶದ ಪ್ರಕಾರ ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್ ಬಳಕೆಯ ಮಿತಿಯ ಒಳಗೆ ಗ್ರಾಹಕರ ಮಾಸಿಕ ಬಳಕೆಯ ಸರಾಸರಿ ಏನಿದೆ ಅದರ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅನುಮತಿಸಿ ಉಚಿತ ವಿದ್ಯುತ್ ಸೌಲಭ್ಯವನ್ನು ನಾವು ನೀಡುತ್ತಿದ್ದೇವೆ.
ಗೃಹಜ್ಯೋತಿ ಯೋಜನೆ ಶೂನ್ಯ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್:
ಗ್ರಾಹಕರು 2022 ಏಪ್ರಿಲ್ 1 ರಿಂದ 2023 ಮಾರ್ಚ್ 31 ವರೆಗೆ 200 ಯೂನಿಟ್ ಗಳಿಗಿಂತಲು ಹೆಚ್ಚು ವಿದ್ಯುತ್ ಬಳಕೆ ಮಾಡಿ, ಯೋಜನೆ ಜಾರಿಯಾದ ಬಳಿಕ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡಿದ್ದರು ಅವರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಯೋಜನೆಯೂ ಕಳೆದ ಆರ್ಥಿಕ ವರ್ಷದಂತೆ ಜಾರಿಯಲ್ಲಿರಲಿದೆ, ಇನ್ನು ಮುಂದಿನ ದಿನಗಳಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳಲಿದೆಯೊ ಅದಕ್ಕ ನಾವು ಬದ್ದರಾಗಿದ್ದೇವೆ ಎಂದರು.