Tuesday, May 21, 2024

ಸಿಎಂ ಸಿದ್ಧರಾಮಯ್ಯ ಬಯೋಪಿಕ್​​​​​; ‘ಲೀಡರ್ ರಾಮಯ್ಯ’ ಆಗಿ ವಿಜಯ್ ಸೇತುಪತಿ!

ಬೆಂಗಳೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾ “ಲೀಡರ್​ ರಾಮಯ್ಯ” ವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳ್ಳಿ ಪರದೆಗೆ ತರಲು ಚಿತ್ರ ತಂಡ ತಯಾರಿ ಸಿದ್ದತೆ ಮಾಡಿಕೊಂಡಿದೆ.

ಇದನ್ನೂ ಓದಿ: ಮಣಿಪುರ ಸಂತ್ರಸ್ತ ವಿದ್ಯಾರ್ಥಿಗಳನ್ನು ದತ್ತು ಪಡೆದ ಸಚಿವ ಜಮೀರ್ ಅಹ್ಮದ್​

ಕಳೆದ ಏಳು ತಿಂಗಳಿನಿಂದ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯನ್ನು ಸಿದ್ದಪಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್‌ಗೆ ‘ಲೀಡರ್ ರಾಮಯ್ಯ’ ಎಂದು ಟೈಟಲ್​ ಇಡಲಾಗಿದೆ. ಈ ಚಿತ್ರದಲ್ಲಿ ಸಿದ್ಧರಾಮಯ್ಯ ಪಾತ್ರದಲ್ಲಿ ವಿಜಯ್​​​ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಮೂಡಿ ಬರ್ತಿರೋ ಜೀವನ ಚರಿತ್ರೆ ಸಿನಿಮಾವನ್ನು ಎರಡು ಭಾಗಗಳಲ್ಲಿ ತೆರೆ ಮೇಲೆ ತರಲು ಸಿದ್ಧತೆ ನಡೆಸಲಾಗಿದೆ. ಮೊದಲಾ ಭಾಗದಲ್ಲಿ ಸಿದ್ದರಾಮಯ್ಯ ಬಾಲ್ಯ ಮತ್ತು ಯವ್ವನದ ದಿನಗಳು ಎರಡನೇ ಭಾಗದಲ್ಲಿ ವಕೀಲ ವೃತ್ತಿ ಆರಂಭದ ದಿನಗಳಿಂದ ಸಿಎಂ ಗಾದಿಯವರೆಗೆ ಏರಿದವೆಗೆ ಇರಲಿದೆ. ಈ ಸಿನಿಮಾ ರಾಜ್ಯದ 24 ನೇ ಮುಖ್ಯಮಂತ್ರಿಯ ಸಿದ್ದರಾಮಯ್ಯ ಜೀವನದ ಸುತ್ತ ಈ ಕತೆ ಸುತ್ತುತ್ತದೆ.

ಈ ಸಿನಿಮಾವು ಸತ್ಯ ರತ್ನಂ ನಿರ್ದೇಶನದಲ್ಲಿ ಮೂಡಿ ಬರಲಿದ್ದು. ಶಶಾಂಕ್​ ಶೇಷಗಿರಿ ಮ್ಯೂಸಿಕ್​ ಕಂಪೋಸಿಂಗ್​​​​​​ ಮಾಡಲಿದ್ದಾರೆ. ಹಯತ್ ಪೀರ್ ಮತ್ತು ಚನ್ನಪ್ಪ ಹಲಳ್ಳಿ ನಿರ್ಮಾಣದಲ್ಲಿ ಬರುತ್ತಿದೆ. ಆಗಸ್ಟ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ಈ ಚಿತ್ರ ತಂಡ ವಿಜಯ್​ ಸೇತುಪತಿ ಕಾಲ್​ ಶೀಟ್​ಗಾಗಿ ಕಾಯುತ್ತಿದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES