Wednesday, January 22, 2025

ಇತಿಹಾಸ ಪ್ರಸಿದ್ದ ದೇವಾಲಯ ಕೆಡವಿದ ಬಿಬಿಎಂಪಿ ಅಧಿಕಾರಿಗಳು: ತೀವ್ರ ಆಕ್ರೋಶ

ಬೆಂಗಳೂರು :  ಅಧಿಕಾರಿಗಳ ಎಡವಟ್ಟಿನಿಂದ ಬೆಂಗಳೂರಿನ ಐತಿಹಾಸಿಕ ದೇವಾಲಯಕ್ಕೆ ಹಾನಿ ಮಾಡಿರುವ ಘಟನೆ ನಗರದ ಎಸ್​. ಪಿ. ರಸ್ತೆಯಲ್ಲಿ ನಡೆದಿದ್ದು, ಸಾರ್ವಜನಿಕರು ತೀವ್ರ ಆಕ್ರೊಶ ವ್ಯಕ್ತವಾಗಿದೆ.

ಇದನ್ನೂ ಓದಿ: ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ದ್ವಿಚಕ್ರ ವಾಹನ ಓಡಾಟಕ್ಕೆ ನಿರ್ಬಂಧ

ಫುಟ್​​ಪಾತ್ ತೆರವು ನೆಪದಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಐತಿಹಾಸಿಕ ಪ್ರಸನ್ನ ಗಂಗಾಧರೇಶ್ವರ ದೇವಸ್ಥಾನಕ್ಕೆ ಭಾರೀ ಹಾನಿಗೊಳಿಸಿದ್ದಾರೆ, ನಾಡಪ್ರಭು ಕೆಂಪೇಗೌಡ ಕಾಲದ ಐತಿಹಾಸಿಕ ದೇಗುಲವನ್ನು ಬೆಳಗ್ಗೆ ಸುಮಾರು 9 ಗಂಟೆಗೆ  ಜೆಸಿಬಿ ಸಹಾಯದಿಂದ ದೇವಾಲಯ ಹಾಳುಗೆಡವಿದ್ದಾರೆ,

ನೂರಾರು ವರ್ಷಗಳ ಇತಿಹಾಸವಿರೋ ದೇವಾಲಯವನ್ನು ರಸ್ತೆ ಅಭಿವೃದ್ಧಿ ಹೆಸರಲ್ಲಿ ಕೆಡವಿದ ಬಿಬಿಎಂಪಿ ಅಧಿಕಾರಿಗಳ ನಡೆಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES