Sunday, May 19, 2024

ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ದ್ವಿಚಕ್ರ ವಾಹನ ಓಡಾಟಕ್ಕೆ ನಿರ್ಬಂಧ

ರಾಮನಗರ : ಇಂದಿನಿಂದ ಬೆಂಗಳೂರು –  ಮೈಸೂರು ಎಕ್ಸ್ ಪ್ರೆಸ್ ಹೈವೆಯಲ್ಲಿ ದ್ವಿಚಕ್ರ, ತ್ರಿ ಚಕ್ರ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿಲಾಗಿದೆ.

ಇದನ್ನೂ ಓದಿ:SC.SP/ TSP ಅಡಿ 34,293.69 ಕೋಟಿ ಕ್ರಿಯಾ ಯೋಜನೆ ಅನುಮೋದನೆ!

ಇತ್ತೀಚೆಗೆ ಎಕ್ಸ್​ಪ್ರೆಸ್​ ವೇ ನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆ, ಅಪಘಾತಗಳ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮಕ್ಕೆ ಮುಂದಾಗಿದ್ದು ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ಕೆಲ ವಾಹನಗಳಿಗೆ ನಿಷೇಧ ಹೇರಿದೆ.

ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಕಾಯ್ದೆ 2002ರ ಅನ್ವಯ ಇಂದು ಬೆಳಗ್ಗೆ 8 ಗಂಟೆಯಿಂದಲೇ ಎಕ್ಸ್​ಪ್ರೆಸ್​ ವೇ ಒಳಗೆ ಬೈಕ್, ಆಟೋ, ಮೋಟಾರ್ ಅಲ್ಲದ ವಾಹನಗಳು, ಟ್ರ್ಯಾಕ್ಟರ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಕ್ವಾಡ್ರಿ ಸೈಕಲ್ ವಾಹನಗಳ ಓಡಾಟಕ್ಕೂ ಓಡಾಡುವಂತಿಲ್ಲ.

ನಿಯಮ ಮೀರಿ ಪ್ರವೇಶಕ್ಕೆ ದಂಡ:

ಇನ್ನೂ ಹೆದ್ದಾರಿ ಪ್ರಾಧಿಕಾರದ ನಿಷೇಧದ ನಡುವೆಯೂ ಎಕ್ಸ್ ಪ್ರೆಸ್ ಹೈವೆ ಒಳಗೆ ನಿಷೇಧಿತ ವಾಹನಗಳು  ಪ್ರವೇಶಿಸಿದರೇ ದಂಡ ಬೀಳಲಿದ್ದು, ನಿಷೇಧಿತ ವಾಹನಗಳಿಗೆ 500ರೂ ದಂಡ ವಿಧಿಸುವುದು ಎಂದು ರಾಮನಗರ ಜಿಲ್ಲಾ ಎಸ್ಪಿ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಎಕ್ಸ್​ಪ್ರೆಸ್​ ವೇ ಸುತ್ತ ರಾಮನಗರದ 9 ಎಂಟ್ರಿ  & ಎಕ್ಸಿಟ್ ಗಳಲ್ಲಿ ರಾಮನಗರ ಪೊಲೀಸರು ತಪಾಸಣೆ ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES