Wednesday, January 22, 2025

ರೀಲ್ಸ್ ಹುಚ್ಚು: ಐ-ಫೋನ್ ಖರೀದಿಗೆ 8 ತಿಂಗಳ ಮಗುವನ್ನು ಮಾರಿದ ತಂದೆತಾಯಿ!

ಕೊಲ್ಕತ್ತಾ : ಐಫೋನ್​ಗಾಗಿ ತಮ್ಮ 8 ವರ್ಷದ ಹೆತ್ತ ಮಗುವನ್ನು ಮಾರಾಟ ಮಾಡಿದ ಪೋಷಕರು, ಘೋರ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

ರೀಲ್ಸ್​ ಹುಚ್ಚಿಗೆ ಬಿದ್ದ ಜಯದೇವ್​ ಮತ್ತು ಪತ್ನಿ, ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡಿ ಫೇಮಸ್ ಆಗಲು ಉತ್ತಮವಾದ ವೀಡಿಯೊ ಕ್ವಾಲಿಟಿಗಾಗಿ ಐ ಫೋನ್​ ಖರೀದಿಸಲು ಚಿಂತನೆ ನಡೆಸಿದ್ದಾರೆ. ಬಳಿಕ, ತಮ್ಮ 8 ತಿಂಗಳ ಕರುಳ ಬಳ್ಳಿಯನ್ನೇ ಮಾರಾಟ ಮಾಡಿ ಐಫೋನ್​ 14 ಖರೀದಿಸಿದ್ದಾರೆ.

ಇದನ್ನು ಓದಿ: ರಾಜ್ಯದ 57 ಖೈದಿಗಳಿಗೆ ಬಿಡುಗಡೆ ಭಾಗ್ಯ!

ಮಗು ಮಾರಿ ಐ-ಫೋನ್‌ 14 ಖರೀದಿಸಿದ್ದ ಪೋಷಕರ ನಡೆಯಲ್ಲಿ ಬದಲಾವಣೆ ಕಂಡಬಂದ ಹಿನ್ನೆಲೆ, 2ನೇ ಮಗುವಿನ ಬಗ್ಗೆ ಅಕ್ಕಪಕ್ಕದ ಮೆನೆಯವರು ವಿಚಾರಣೆ ಮಾಡಿದಾಗ ತಂದೆ-ತಾಯಿ ಇಲ್ಲಸಲ್ಲದ ನೆಪ ಹೇಳುತ್ತಿದ್ದರು, ಹಣಕ್ಕಾಗಿ ಪರದಾಡ್ತಿದ್ದವರ ಕೈಯಲ್ಲಿ ಇದ್ದಕ್ಕಿದ್ದಂತೆ ಐಫೋನ್ ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ,

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನೆ ಸಂಬಂಧ ಮಗುವಿನ ತಾಯಿ ಹಾಗು 8 ತಿಂಗಳ ಮಗುವನ್ನು ಕೊಂಡುಕೊಂಡ ಮಹಿಳೆಯನ್ನು ಬಂಧಿಸಿದ್ದು, ಪಾಪಿ ತಂದೆಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

 

RELATED ARTICLES

Related Articles

TRENDING ARTICLES