Monday, December 23, 2024

ಕಣ್ಣಿಗೆ ಕಾರದಪುಡಿ ಎರಚಿ ಲಕ್ಷಾಂತರ ಹಣ ಎಗರಿಸಿದ ಖತರ್ನಾಕ್​ ಕಳ್ಳ!

ಮೈಸೂರು: ಕಳ್ಳನೋರ್ವ ಕಣ್ಣಿಗೆ ಕಾರದಪುಡಿ ಎರಚಿ‌ ಲಕ್ಷಾಂತರ ಹಣ ದರೋಡೆ ನಡೆಸಿ ಪರಾರಿಯಾದ ಘಟನೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕ ಅಲ್ ಕೈದಾ ಅಂಗಸಂಸ್ಥೆ!

ಕ್ಯಾಶ್ ಕಲೆಕ್ಟರ್ ತುಳಸಿದಾಸ್, ದರಸಗುಪ್ಪೆ ಎಸ್‌ಎಸ್‌ಇ ಕಂಪನಿಯಿಂದ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಎಸ್​ಬಿಐ ಬ್ಯಾಂಕ್‌ಗೆ ಹಣ ಜಮೆ ಮಾಡಲು 44,45,000 ಹಣ ವನ್ನು ಎಡರು ಬ್ಯಾಗ್​ನಲ್ಲಿಟ್ಟು ತಂದಿದ್ದರು, ಬ್ಯಾಂಕ್ ಮುಂದೆ ಆಟೋ ನಿಲ್ಲಿಸಿ ಕೆಳಗಿಳಿದ ತಕ್ಷಣ ತುಳಸಿದಾಸ್​ ಕಣ್ಣಿಗೆ ಕಾರದ ಪುಡಿ ಎರಚಿದ ಕಳ್ಳ, ಎರಡು ಬ್ಯಾಗ್​ ಗಳ ಪೈಕಿ ಒಂದು ಬ್ಯಾಗ್​ನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ. ಬ್ಯಾಗ್​ನಲ್ಲಿ 6,05,700 ಇತ್ತು ಎನ್ನಲಾಗಿದೆ.

ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಯಾಶ್​ ಕಲೆಕ್ಟರ್​ ತುಳಸಿದಾಸ್​. ಮೇಟಗಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES