ಚಿಕ್ಕಮಂಗಳೂರು : ತೋಟಕ್ಕೆ ತೆರಳಿದ್ದ ವೃದ್ಧೆಯೊಬ್ಬರು ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೊಸಸಿದ್ರಳ್ಳಿ ಗ್ರಾಮದಲ್ಲಿ ನೆಡೆದಿದೆ.
ಸಖರಾಯಪಟ್ಟಣ ಸಮೀಪದ ಹೊಸಸಿದ್ರಳ್ಳಿ ಗ್ರಾಮದ ರೇವಮ್ಮ(62) ಮೃತ ವೃದ್ಧೆ. ನಿನ್ನೆ ಸಂಜೆ ತಮ್ಮ ಅಡಿಕೆ ತೋಟವನ್ನು ನೋಡಲು ತೆರಳಿದ್ದರು ಇಂದು ತಾಯಿ ಹಳ್ಳದಲ್ಲಿ ಬಿದ್ದು ಶವವಾಗಿ ಪತ್ತೆಯಾಗಿದ್ದಾರೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆ ಹಿನ್ನಲೆ ಹಳ್ಳ ತುಂಬಿ ಹರಿಯುತ್ತಿದೆ. ಕೆಲದಿನಗಳಿಂದ ಬೆಂಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಸಾವು-ನೋವು ಸಂಭವಿಸುತ್ತಿವೆ. ಅದರಂತೆ ಕಾಫಿನಾಡಲ್ಲಿ ಮಳೆಗೆ ಮೂರನೇ ಬಲಿ ಆಗಿದೆ.
ಇದನ್ನು ಓದಿ : ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ
ಭಾರಿ ಮಳೆಯಿಂದ ತಾಯಿ ಹಳ್ಳ ತುಂಬಿ ಹರಿಯುತ್ತಿದೆ. ಮೃತ ರೇವಮ್ಮ ತೋಟ ನೋಡಲು ಹೋಗಿದ್ದರು. ಬಳಿಕ ನಿನ್ನೆ ಸಂಜೆಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ, ವೃದ್ಧೆಯು ನಾಪತ್ತೆ ಆಗಿರುವ ಬಗ್ಗೆ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಹರಿಯುತ್ತಿದ್ದ ತಾಯಿ ಹಳ್ಳದಲ್ಲಿ ಬಿದ್ದು ವೃದ್ಧೆ ಕೊಚ್ಚಿ ಹೋಗಿದ್ದು, ಶವ ಪತ್ತೆಯಾಗಿದ್ದಾರೆ.