Wednesday, January 22, 2025

ಮೌಡ್ಯಾಚರಣೆಗೆ ನವಜಾತ ಹೆಣ್ಣುಮಗು ಸಾವು!

ತುಮಕೂರು :  ತಮ್ಮ ದೇವರಿಗೆ ಸೂತಕ ಎಂಬ ಕಾರಣಕ್ಕೆ ಬಾಣಂತಿ, ಹಸುಗೂಸನ್ನು ಊರ ಹೊರಗಿನ ಸಣ್ಣಗುಡಿಸಲಿನಲ್ಲಿಟ್ಟಿದ್ದ ಹೆಣ್ಣುಮಗು ಸಾವಿಗೀಡಾಗಿರುವ ಅಮಾನವೀಯ ಘಟನೆ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ದ್ವೇಷ ರಾಜಕಾರಣ ದೇಶವನ್ನು ಆವರಿಸುತ್ತಿದೆ, ಪ್ರೀತಿಯ ಭಾರತ ಮರು ಸೃಷ್ಟಿಸಬೇಕಿದೆ: ಯುವ ಸಮೂಹಕ್ಕೆ ಸಿಎಂ ಕರೆ

ಗ್ರಾಮಸ್ಥರ ಮೂಢನಂಬಿಕೆಗೆ ಸೂತಕದ ಮೌಡ್ಯ ಸಂಪ್ರದಾಯಕ್ಕೆ ಸಿದ್ದೇಶ್‌, ವಸಂತ ದಂಪತಿಯ 10 ದಿನಗಳ ಹೆಣ್ಣು ಮಗು ಸಾವಿಗೀಡಾಗಿದೆ,

ತುಮಕೂರು ತಾಲೂಕಿನ, ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಣಂತಿಯನ್ನು ಮಗು ಜನಿಸಿದ ಮೇಲೇ ಸೂತಕ ಇರುತ್ತದೆ, ಈ ಸೂತಕವು ನಮ್ಮ ದೇವರಿಗೆ ಆಗುವುದಿಲ್ಲ ಎಂಬ ಕಾರಣಕ್ಕೆ ಬಾಣಂತಿ ಹಾಗೂ ಮಗುವನ್ನು ಮಳೆ, ಗಾಳಿಯಿದ್ದರೂ ಲೆಕ್ಕಿಸದೇ ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಡಲಾಗಿತ್ತು, ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು,ವಿಪರೀತ ಶೀತದಿಂದ ಬಳಲಿದ ಮಗು ಕೊನೆಗೆ ತನ್ನ ಉಸಿರುಚೆಲ್ಲಿದೆ.

ಈ ಮೌಢ್ಯ ಸಂಪ್ರದಾಯದ ಕುರಿತು ಈ ಹಿಂದೆಯೂ ಪವರ್​ ಟಿವಿಯಲ್ಲಿ ಸುದ್ದಿ ಪ್ರಸಾರ ಮಾಡಿತ್ತು,ಸುದ್ದಿ ಪ್ರಸಾರವಾದ ಬೆನ್ನಲ್ಲೇ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮೌಢ್ಯ ಆಚರಣೆ ಕುರಿತು ಅರಿವು ಮೂಡಿಸಿದ್ದರೂ ಗ್ರಾಮಸ್ಥರು ಎಚ್ಚೆತ್ತುಕೊಳ್ಳದ ಕಾರಣ ನವಜಾತ ಹೆಣ್ಣುಮಗು ಸಾವಿಗೀಡಾಗಿದೆ.

RELATED ARTICLES

Related Articles

TRENDING ARTICLES