Monday, December 23, 2024

ಡಿಕೆಶಿ ಹೇಳಿಕೆಗಳಿಂದಲೇ ಸರ್ಕಾರದಲ್ಲಿ ಅಸ್ಥಿರತೆ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗಳಿಂದಲೇ ಕಾಂಗ್ರೆಸ್ ಸರ್ಕಾರದಲ್ಲಿ ಅಸ್ಥಿರತೆ ಹುಟ್ಟುತ್ತಿರೋದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ದಿನದಿಂದಲೂ ಎಲ್ಲವೂ ಸರಿಯಿಲ್ಲ ಅಂತ ತೋರಿಸಿಕೊಟ್ಟಿದೆ. ಡಿಕೆಶಿ ಸಿಂಗಾಪುರ ಬಗ್ಗೆ ಹೇಳಿಕೆ ಕೊಡುವ ಅಗತ್ಯ ಇರಲಿಲ್ಲ ಎಂದು ಕಿಚಾಯಿಸಿದರು.

ಮುಖ್ಯಮಂತ್ರಿ ಆಯ್ಕೆಗಾಗಿ ಸೀಕ್ರೆಟ್ ಮತ ಮಾಡಿದ್ರು. ಈಗ ಸಚಿವರ ವಿರುದ್ಧ ಶಾಸಕರ ಅಸಮಧಾನ, ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ಪೈಪೋಟಿ ಇರುವುದರಿಂದ ಸಹಜವಾಗಿ ಅಸಮಾಧಾನ ಇದೆ. ಇದನ್ನು ಯಾರೂ ಮರೆಮಾಚಲು ಆಗಲ್ಲ ಎಂದು ಹೇಳಿದರು.

ಇದನ್ನೂ ಓದಿ : ಮೋದಿ 56 ಇಂಚಿನ ಎದೆಯಲ್ಲಿ ಎದೆಗಾರಿಕೆ ಯಾಕಿಲ್ಲ? : ದಿನೇಶ್ ಗುಂಡೂರಾವ್

ಸಾಮಾನ್ಯರ ಪಾಡೇನು?

ಕಾಂಗ್ರೆಸ್​ನವರಿಗೆ ಸಂಪೂರ್ಣ ಬಹುಮತ ಇದೆ. ಅವರು ಉತ್ತಮ ಆಡಳಿತ ಕೊಡಬಹುದು. ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಕೊಲೆಗಳಾಗ್ತಿವೆ. ನಿನ್ನೆ ಹೈಕೋರ್ಟ್ ಜಡ್ಜ್​ಗಳಿಗೆ ಕೊಲೆ ಬೆದರಿಕೆ ಬಂದಿದೆ. ಅವರಿಗೇ ಈ ಪರಿಸ್ಥಿತಿ ಬಂದ್ರೆ, ಸಾಮಾನ್ಯರ ಪಾಡೇನು? ಎಂದು ಕಿಡಿಕಾರಿದರು.

ಯಾರಿಗೂ ನ್ಯಾಯ ಸಿಗಲ್ಲ

ಇವರ ಅವಧಿಯಲ್ಲಿ ಯಾರಿಗೂ ನ್ಯಾಯ ಸಿಗಲ್ಲ. ಎರಡೇ ತಿಂಗಳಲ್ಲಿ ರಾಜ್ಯದಲ್ಲಿ ಅತಾಜಕತೆ ಸೃಷ್ಟಿ ಆಗಿದೆ. ಮಳೆಯೂ ಇದೆ, ಬರವೂ ಇದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದನ್ನೂ ನಿಭಾಯಿಸಲು ಆಗ್ತಿಲ್ಲ. ಈ ಸರ್ಕಾರ ಆಂತರಿಕವಾಗಿ ಬಾಲಗ್ರಹ ಪೀಡಿತವಾಗಿದೆ. ಈಗ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES