Sunday, May 12, 2024

ಮೋದಿ 56 ಇಂಚಿನ ಎದೆಯಲ್ಲಿ ಎದೆಗಾರಿಕೆ ಯಾಕಿಲ್ಲ? : ದಿನೇಶ್ ಗುಂಡೂರಾವ್

ಬೆಂಗಳೂರು : ಮೋದಿಯವರ 56 ಇಂಚಿನ ಎದೆಯಲ್ಲಿ ಹಿಂಸಾಚಾರ ಸದ್ದಡಗಿಸುವ ಎದೆಗಾರಿಕೆ ಯಾಕಿಲ್ಲ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.

ಮಣಿಪುರ ಹಿಂಸಾಚಾರ ಕುರಿತು ಟ್ವೀಟ್ ಮಾಡಿರುವ ಅವರು, ಮಣಿಪುರ ಭಾರತದಲ್ಲಿದಿಯೇ ಅಥವಾ ಅಫ್ಘಾನಿಸ್ತಾನದಲ್ಲಿದೆಯೇ? ಮಣಿಪುರ ಗಲಭೆ ನಿಯಂತ್ರಿಸಲು ಪ್ರಧಾನಿಯವರಿಗೆ ಸಾಧ್ಯವಿಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ಮಣಿಪುರದಲ್ಲಿ ಕಳೆದ ಮೂರು ತಿಂಗಳಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಸಜೀವ ದಹನ, ಮಹಿಳೆಯರ ನಗ್ನ ಮೆರವಣಿಗೆಯಂತಹ ಭೀಭತ್ಸ್ತ ಕೃತ್ಯಗಳು ಸರಣಿ ರೂಪದಲ್ಲಿ ನಡೆಯುತ್ತಿವೆ.‌ ಕೊಲೆ ಅತ್ಯಾಚಾರಗಳಿಗೆ ಲೆಕ್ಕವೇ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಹರಿಪ್ರಸಾದ್ ಪರ ಬ್ಯಾಟ್ ಬೀಸಿದ ಹೆಚ್.ಕೆ ಪಾಟೀಲ್

ಮೋದಿಗೆ ಎದೆಗಾರಿಕೆ ಯಾಕಿಲ್ಲ?

ಮಣಿಪುರ ಹಿಂಸಾಚಾರವನ್ನು ಕಳೆದ 3 ತಿಂಗಳಿಂದ ಜೀವಂತವಾಗಿ ಬಿಟ್ಟಿರುವುದು ಕೇಂದ್ರದ ಅಸಹಾಯಕತೆಗಿಂತ ಹೆಚ್ಚಾಗಿ ಹೇಡಿತನ ತೋರಿಸುತ್ತಿದೆ‌. ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಮೋದಿಯವರ 56 ಇಂಚಿನ ಎದೆಯಲ್ಲಿ ಹಿಂಸಾಚಾರ ಸದ್ದಡಗಿಸುವ ಎದೆಗಾರಿಕೆ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರವನ್ನು ವಜಾ ಮಾಡಲಿ

ಮಣಿಪುರದಲ್ಲಿ ಬಿಜೆಪಿಯಲ್ಲದೇ ಬೇರೆ ಪಕ್ಷದ ಸರ್ಕಾರವಿದ್ದಿದರೆ ಕೇಂದ್ರ ಸುಮ್ಮನಿರುತಿತ್ತೆ? ಮಣಿಪುರ ದೊಂಬಿ ಹಾಗೂ ಕೊಲೆಗಡುಕರ ರಾಜ್ಯವಾಗಲು ಅಲ್ಲಿನ ಸರ್ಕಾರದ ನಿಷ್ಕ್ರಿಯತೆ ಅತಿ ಮುಖ್ಯ ಕಾರಣ. ಕೇಂದ್ರ ಈ ಕೂಡಲೇ ಸಂವಿಧಾನದ 356ನೇ ವಿಧಿಯ ಅನ್ವಯ ಅಲ್ಲಿಯ ಸರ್ಕಾರವನ್ನು ವಜಾ ಮಾಡಲಿ. ರಾಷ್ಟ್ರಪತಿ ಆಳ್ವಿಕೆಯ ಮೂಲಕ ಪರಿಸ್ಥಿತಿ ನಿಯಂತ್ರಿಸಲಿ ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES