ಬೆಂಗಳೂರು : ಹೆಸರೇಳದೇ ಶಾಸಕ ಕೆ.ಎಂ ಶಿವಲಿಂಗೇಗೌಡ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಪಸಭಾಪತಿ ಮೇಲೆ ನಿನ್ನೆ ಯಾವ ರೀತಿ ಟ್ರೀಟ್ ಮಾಡಿ ಮಾತನಾಡಿದ್ದಾರೆ. ದಲಿತ ಉಪಸಭಾಪತಿಗೆ ಅವಮಾನ ಮಾಡಿದ್ದಾರೆ ಅಂತ ಹೇಳಿದ್ದರು. ಹಾಗಾದ್ರೆ, ನಿನ್ನೆ ಇವರು ಮಾಡಿದ್ದು ಏನು? ಎಂದು ಕೌಂಟರ್ ಕೊಟ್ಟರು.
ಖಾಲಿ ಕುರ್ಚಿಗಳಿಗೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ ಕೊಟ್ಟಿದ್ದಾರೆ. ಆದ್ರೆ, ಅನ್ನ ಕೊಡುವ ರೈತರಿಗೆ ಏನು ಮಾಡಿದ್ದಾರೆ. ರೈತರಿಗೆ ಕೊಡಬೇಕಾದ 4 ಸಾವಿರ ರೂಪಾಯಿ ಕಡಿತ ಮಾಡಿದ್ದಾರೆ. ಬರಗಾಲ ಬಗ್ಗೆ ನಾವು ಮನವಿ ಕೊಟ್ಟಿದ್ದೆವು. ಆದರೂ, ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ : ಮೋದಿ ವಿಶ್ವಗುರು ಅಂತೆ, ವಿಶ್ವಗುರು..! : ಸಿದ್ದರಾಮಯ್ಯ
ಒಟ್ಟಾಗಿ ಹೋರಾಟ ಮಾಡಲು ನಿರ್ಧಾರ
ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಾವು ಜಂಟಿ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ. ನಾವು ಒಟ್ಟಾಗಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ಸರ್ಕಾರದ ಅಕ್ರಮಗಳ ವಿರುದ್ಧ ನಮ್ಮ ಜಂಟಿ ಹೋರಾಟ ಮುಂದುವರಿಯಲಿದೆ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ನನ್ನ ಅವಧಿಯಲ್ಲಿ ನನ್ನ ಕೈ ಕಟ್ಟಲಾಗಿತ್ತು
ನೈಸ್ ರೋಡ್ ಹಗರಣ ವಿಚಾರ ಕುರಿತು ಮಾತನಾಡಿ, ನೈಸ್ ರಸ್ತೆ ಹಗರಣ ವರದಿ ಬಗ್ಗೆ ಏನಾಗಿದೆ? ನೈಸ್ ರಸ್ತೆ ಅಕ್ರಮ ಬಗ್ಗೆ ಬೊಮ್ಮಾಯಿ ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದಾರೆ. ಸರ್ಕಾರದ ಪರವಾಗಿ ತೀರ್ಪುಗಳು ಬಂದಿವೆ. ನನ್ನ ಅವಧಿಯಲ್ಲಿ ನನ್ನ ಕೈ ಕಟ್ಟಲಾಗಿತ್ತು. ಸದನ ಸಮಿತಿ ವರದಿ ಮಂಡನೆ ಆದರೂ ಕ್ರಮ ಆಗಿಲ್ಲ ಎಂದು ಹೇಳಿದರು.