Monday, December 23, 2024

ವಿಪಕ್ಷ ನಾಯಕ ಸ್ಥಾನ ಸಿಗಲಿಲ್ಲ ಅಂತ ಯತ್ನಾಳ್ ಕುಸಿದು ಬಿದ್ದಿದ್ದಾರೆ : ಎಂ. ಲಕ್ಷ್ಮಣ

ಮೈಸೂರು : ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲಿಲ್ಲ ಅಂತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಕುಸಿದು ಬಿದ್ದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ‌. ಲಕ್ಷ್ಮಣ ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನಾಗಿದೆ ಯತ್ನಾಳ್ ಅವರಿಗೆ? ಯತ್ನಾಳ್ ನೋಡೋಕೆ ಸಿಎಂ ಸಮೇತ ಎಲ್ಲರೂ ಹೋಗುತ್ತಿದ್ದಾರೆ. ಇನ್ನೂ ಮೂರು ದಿನ ಬರೀ ಇವರನ್ನು ನೋಡೋದೆ ನಡೆಯುತ್ತದೆ ಎಂದು ಕಿಚಾಯಿಸಿದ್ದಾರೆ.

ಸದನದಲ್ಲಿರುವವರೆಲ್ಲಾ ರೌಡಿಗಳೇ

ಸದನದಲ್ಲಿರುವವರೆಲ್ಲಾ ಬಹುತೇಕ ರೌಡಿಗಳೇ. ನಿನ್ನೆ ಅವರ ನಡವಳಿಕೆ ನೋಡಿದರೆ ಗೊತ್ತಾಗುತ್ತದೆ. ರೌಡಿಗಳಿಗಿಂತ ಹೆಚ್ಚಾಗಿ ನಡೆದುಕೊಂಡಿದ್ದಾರೆ. ಟಿ ನರಸೀಪುರ ಘಟನೆ ಇನ್ನು ಮುಂದುವರಿಸಿದ್ದೀರಿ. ಇನ್ನೊಂದು ಕೊಲೆಯಾಗುವವರೆಗೂ ಮುಂದುವರಿಸುತ್ತೀರಾ?ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ಯತ್ನಾಳ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಶಂಕಿತ ಭಯೋತ್ಪಾದಕರನ್ನು ಬಂಧಿಸಿದಕ್ಕೆ ಅಭಿನಂದನೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಅಭಿನಂದನೆ. ಬಂಧಿತರು ರೌಡಿಶೀಟರ್‌ಗಳಾಗಿದ್ದವರು. ಬಿಜೆಪಿ ಅವಧಿಯಲ್ಲಿ ಹೆಚ್ಚು ರೌಡಿಶೀಟರ್‌ಗಳ ಹೆಸರು ಕೈ ಬಿಡಲಾಗಿತ್ತು. ಯಾವ ಕಾರಣಕ್ಕೆ ಹೆಸರು ಕೈ ಬಿಡಲಾಗಿತ್ತು ಎಂದು ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES