ಬೆಂಗಳೂರು : ಸ್ಪೀಕರ್ ಯು.ಟಿ ಖಾದರ್ ಅವರಿಗೆ ಅವರ ತಪ್ಪಿನ ಅರಿವಾಗಿದೆ. ಅದಕ್ಕಾಗಿ ಬಂದು ರಾಜ್ಯಪಾಲರ ಭೇಟಿ ಮಾಡಿ ತಮ್ಮ ತಪ್ಪನ್ನು ಮುಚ್ಚಿಕೊಳ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಿಗೆ ಎಲ್ಲಾ ವರದಿ ಕೊಟ್ಟಿದ್ದೇವೆ. ಸೂಕ್ತ ಡೈರೆಕ್ಷನ್ ಕೊಡೋದಾಗಿ ಹೇಳಿದ್ದಾರೆ ಎಂದರು.
ರಾಜ್ಯಪಾಲರಿಗೆ ಗೊತ್ತಾಗಿದೆ. ಮುಂದೆ ಏನು ಮಾಡಬೇಕು ಅಂತ ಅವರು ನಿರ್ಧಾರ ಮಾಡ್ತಾರೆ. ನಾವು ನಿನ್ನೆಯೇ ಹೇಳಿದ್ದೆವು. ರಾಜ್ಯಪಾಲರ ಭೇಟಿ ಮಾಡ್ತೀವಿ ಅಂತ. ನಾಳೆಯೂ ಸದನಕ್ಕೆ ಹೋಗಲ್ಲ. ಜೆಡಿಎಸ್ ಕೂಡ ಭಾಗಿಯಾಗ್ತಿದೆ. ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡ್ತಿದ್ದೇವೆ. ಎಲ್ಲರೂ ಒಟ್ಟಾಗಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ನಾವು ಕನಿಷ್ಠ ಶಿಕ್ಷೆ ಕೊಟ್ಟಿದ್ದೇವೆ, ಕಠಿಣ ಕ್ರಮಕ್ಕೂ ಹಿಂಜರಿಯಲ್ಲ : ಯು.ಟಿ ಖಾದರ್
ಸ್ಟೇಷನ್ ಗೆ ಬರೋಕೆ ಹೆದರುತ್ತಿದ್ದಾರೆ
ಇದನ್ನ ನೋಡಿದ್ರೆ ತುರ್ತು ಪರಿಸ್ಥಿತಿ ಘಟನೆ ನೆನಪಿಗೆ ಬರ್ತಿದೆ. ಪೊಲೀಸ್ ಸ್ಟೇಷನ್ ಗೆ ಬರೋಕೆ ಎಲ್ಲಾ ಹೆದರುತ್ತಿದ್ದಾರೆ. ಪೊಲೀಸರು ಮಾಡೋ ಕೆಲಸ ಕೆಲ ಆಂಟಿ ಎಲಿಮೆಂಟ್ಸ್ ಮಾಡ್ತಿದೆ. ನಿನ್ನೆ ಭಯೋತ್ಪಾದಕರು ಸಿಕ್ಕಿದ್ದಾರೆ. ಅವರನ್ನು ಈಗಲೇ ಭಯೋತ್ಪಾದಕರು ಅಂತ ಹೇಳಲಾಗಲ್ಲ ಅಂತ ಗೃಹ ಸಚಿವರು ಹೇಳ್ತಾರೆ ಎಂದು ಛೇಡಿಸಿದರು.
ಬಂಧಿತರ ಬಳಿ ಶಸ್ತ್ರಾಸ್ತ್ರ ಸಕ್ಕಿವೆ. ಇದನ್ನು ಎನ್ ಐಎ (NIA) ಗೆ ಕೊಡಿ ಅಂದ್ರೆ ಕೊಟ್ಟಿಲ್ಲ. ಗೃಹ ಸಚಿವ ಡಾ.ಜಿ ಪರಮೇಶ್ವ್ ಈ ರೀತಿ ಹೇಳಿಕೆ ನೀಡಿದ್ರೆ ಹೇಗೆ ಕೊಡ್ತಾರೆ ಎಂದು ಬಸವರಾಜ ಬೊಮ್ಮಾಯಿ ಚಾಟಿ ಬೀಸಿದರು.