Wednesday, January 8, 2025

ಮಗನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದ ತಂದೆ ಸೇರಿದ್ದು ಮಸಣ

ಬಳ್ಳಾರಿ : ಮಗನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದಾಗ ವ್ಯಕ್ತಿಯೊಬ್ಬರನ್ನು ದುರ್ಷರ್ಮಿಗಳು ಭೀಕರವಾಗಿ ಕೊಲೆಗೈದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ನಿನ್ನೆ ಬರ್ಬರ ಹತ್ಯೆ ನಡೆದಿತ್ತು. ಮೆಹಬೂಬ್ ಪಾಷ ಕೊಲೆಯಾದ ವ್ಯಕ್ತಿ. ಈತ ರಿಯಲ್ ಎಸ್ಟೇಟ್ ಹಾಗೂ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದನು.

ಈ ಕುರಿತು ಬಳ್ಳಾರಿಯಲ್ಲಿ ಎಸ್ಪಿ ರಂಜಿತ್ ಕುಮಾರ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ. ಮೂರು ಜನ ಸೇರಿ ಮೆಹಬೂಬ್ ಪಾಷನನ್ನು ಕೊಲೆ ಮಾಡಿದ್ದಾರೆ. ಈಗಾಗಲೇ ಮೂರು ಜನರ ಆರೋಪಗಳನ್ನು ಬಂಧಿಸಿದ್ದೇವೆ. ಕೋಳಿ ಅನ್ವರ್, ಆಲ್ತಾಫ್, ಸೀರಾಜ್ ಎಂಬುವವರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : 5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಮೂರು ತಿಂಗಳಿಂದ ಕೊಲೆ ಸ್ಕೆಚ್

ಪ್ರಾಥಮಿಕ ತನಿಖೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೆಹಬೂಬ್ ಪಾಷ ರಿಯಲ್ ಎಸ್ಟೇಟ್ ಹಾಗೂ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. ವ್ಯವಹಾರದಲ್ಲಿ ಮೆಹಬೂಬ್ ಭಾಷಾ ಮುಂದಿದ್ದರು, ಇದನ್ನು ಸಹಿಸದೆ ಮೂರು ಜನರ ಕೊಲೆ ಮಾಡಿದ್ದಾರೆ. ಕಳೆದ ಮೂರು ತಿಂಗಳಿಂದ ಕೊಲೆ ಸ್ಕೆಚ್ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಮೆಹಬೂಬ್ ಭಾಷಾ ಎಲ್ಲಿಗೆ ಹೋದರು ಈ ಮೂರು ಜನರು ಫಾಲೋ ಮಾಡುತ್ತಿದ್ದರು. ಭಾಷಾ ನಿನ್ನೆ ಮಗನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದಾಗ ಭೀಕರವಾಗಿ ಕೊಲೆ ಮಾಡಿದ್ದರು. ವ್ಯವಹಾರದಲ್ಲಿ ಮೆಹಬೂಬ್ ಭಾಷಾ ಏಳ್ಗೆ ಸಹಿದೆ ಕೊಲೆ ಮಾಡಲಾಗಿದೆ ಎಂದು ಆರೋಪಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES