Monday, January 6, 2025

ಚಾಮುಂಡಿ ಬೆಟ್ಟಕ್ಕೆ ನಟ ಸಂಜಯ್ ದತ್ ಭೇಟಿ

ಮೈಸೂರು : ಖ್ಯಾತ ನಟ ಸಂಜಯ್​ ದತ್​ ಮತ್ತು ಕೆ.ಡಿ ಚಿತ್ರ ತಂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿ ದರ್ಶನ ಪಡೆದಿದ್ದಾರೆ.

ಸಂಜಯ್​ ದತ್ತ ಕನ್ನಡದ ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣದ ಬಿಡುವಿನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಡಿ ನೀಡಿದ್ದಾರೆ.

ಸಂಜಯ್​ ದತ್​ ಅವರು ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದು, ನಿರ್ದೇಶಕ ‘ಜೋಗಿ’ ಪ್ರೇಮ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸೌತ್​ ಸಿನಿಮಾಗಳ ಬಗ್ಗೆ ತಮಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಗಾಂಧಿನಗರದಲ್ಲಿ ಥಿಯೇಟರ್ ಎಲ್ಲಿದೆ ಅಂತ ಗೊತ್ತಿರಲಿಲ್ಲ : ರಿಷಬ್ ಶೆಟ್ಟಿ

ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ

‘ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ. ಮಾತೆಯ ದರ್ಶನ ಮಾಡಿ ತುಂಬಾ ಖುಷಿ ಆಯಿತು’ ಎಂದು ಸಂಜಯ್​ ದತ್​ ಅವರು ಹೇಳಿದ್ದಾರೆ. ‘ಕೆಡಿ’ ಚಿತ್ರತಂಡದ ಜೊತೆ ಬಂದಿದ್ದ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು.

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಸಂಜಯ್​ ದತ್​ ಈ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ನಿರೀಕ್ಷೆ ಡಬಲ್​ ಆಗಿದೆ. ಶೂಟಿಂಗ್​ ಸಲುವಾಗಿ ಕರುನಾಡಿಗೆ ಬಂದಿರುವ ಸಂಜಯ್​ ದತ್​ ಅವರು ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES