Wednesday, January 22, 2025

ಸಿದ್ದರಾಮಯ್ಯ-ಡಿಕೆಶಿ ವಿರುದ್ಧ ಶೋಭಾ ಕರಂದ್ಲಾಜೆ ರೆಬಲ್

ಚಿಕ್ಕಮಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೇ ತಿಂಗಳಿಗೆ ಕಾಂಗ್ರೆಸ್ ಸರ್ಕಾರ ನೈತಿಕತೆ ಕಳೆದುಕೊಂಡಿದೆ ಎಂದು ಕುಟುಕಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಾದ್ಯಂತ ಕೊಲೆಯಾಗ್ತಿದೆ. ಕಾಂಗ್ರೆಸ್ ನೇತೃತ್ವ, ಕೃಪಾಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಯಾಗ್ತಿದೆ. ಜೈನ ಮುನಿ (ದಿಗಂಬರ ಸ್ವಾಮಿ) ಹತ್ಯೆ, ಬೆಂಗಳೂರಲ್ಲಿ ಹಾಡಹಗಲೇ ಟೆಕ್ಕಿ ಸಾಯ್ತಾರೆ, ಉಳ್ಳಾಲದಲ್ಲಿ ನಮ್ಮ ಕಾರ್ಯಕರ್ತನ ಶವ ನೀರಲ್ಲಿ ಸಿಗುತ್ತೆ. ಹನುಮ ಜಯಂತಿ ಯಶಸ್ವಿಯಾಗಿದ್ದಕ್ಕೆ ವೇಣುಗೋಪಾಲ್ ಕೊಲೆಯಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ : ರಾಜ್ಯದಲ್ಲಿ 46,149 ರೌಡಿಶೀಟರ್ಗಳಿದ್ದಾರೆ : ಡಾ.ಜಿ ಪರಮೇಶ್ವರ್

136 ಸೀಟ್ ಗೆದ್ದಿದ್ದೇವೆಂಬ ದರ್ಪ

ಚುನಾವಣೆಗೂ ಮುನ್ನ ಘೋಷಿಸಿದ್ದ ಉಚಿತ ಗ್ಯಾರಂಟಿ ಎಲ್ಲೋದ್ವು? ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿ ಎಂದಿದ್ರಿ. ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ? ಮೊದಲು ಅದನ್ನು ಹೇಳಿ. ಇವ್ರು A4 ಅಪರಾಧಿಯನ್ನು A1 ಮಾಡ್ತಾರೆ, A1 ಅಪರಾಧಿಯನ್ನು ರಕ್ಷಣೆ ಮಾಡ್ತಾರೆ. ಇಂದು ಇಂದಿನ ಕಾಂಗ್ರೆಸ್ ಸರ್ಕಾರದ ನೀತಿ ರಾಜಕೀಯ. 136 ಸೀಟ್ ಗೆದ್ದಿದ್ದೇವೆಂದು ದರ್ಪದಿಂದಿದ್ದಾರೆ, ಮುಂದೆ ಜನ ಪಾಠ ಕಲಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಗುಡುಗಿದ ಶೋಭಾ ಕರಂದ್ಲಾಜೆ ಅವರು, ಪಕ್ಷದ‌ ಪ್ರಶ್ನೆಗೆ ರೆಸ್ಪಾನ್ಸ್ ನೀಡಲು ನಿರಾಕರಿಸಿದರು. ಮಹಿಳಾ ರಾಜ್ಯಾಧ್ಯಕ್ಷೆ, ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿದರು.

RELATED ARTICLES

Related Articles

TRENDING ARTICLES