Monday, June 3, 2024

ಅವ್ರು ಮಾಜಿ ಪ್ರಧಾನಿ ಮಗ ಅಂತ ಎಲ್ಲರಿಗೂ ಗೊತ್ತಲ್ವಾ? : ಚಲುವರಾಯಸ್ವಾಮಿ

ಮಂಡ್ಯ : ಭ್ರಷ್ಟಚಾರಕ್ಕೆ ಜಾತಿ ಇದ್ಯಾ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಕೌಂಟರ್ ಕೊಟ್ಟರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ಭ್ರಷ್ಟಾಚಾರರದಲ್ಲಿ ಜಾತಿ ಇದೇ ಅಂತ ಹೇಳಿಲ್ಲ ಎಂದು ಹೇಳಿದರು.

ಸದನದಲ್ಲಿ ಎರಡು ದಿನ ಆ ಕುರಿತು ಚರ್ಚೆಯಾಗಿದೆ. ಸದನದ ವಿಷಯವನ್ನು ದಿನಾ ಹೊರಗಡೆ ಬಂದು ಮಾತನಾಡೋದು ಸೂಕ್ತವಲ್ಲ. ಅವರು ಮಾಜಿ ಪ್ರಧಾನ ಮಗ ಅಂತ ಮಾತಾಡ್ತಾರೆ. ಮಾಜಿ ಪ್ರಧಾನಿ ಮಗ, ದೇವೇಗೌಡರ ಮಗ ಅಂತ ಎಲ್ಲರಿಗೂ ಗೊತ್ತಲ್ವಾ? ದೇವೇಗೌಡರ ಹೆಸರನ್ನು ಏಕೆ ಕುಮಾರಸ್ವಾಮಿ ತೆಗೆದುಕೊಳ್ಳಬೇಕು? ಎಂದು ಕುಟುಕಿದರು.

ಇದನ್ನೂ ಓದಿ : ಮೋದಿ ಮಾತು ಕೇಳಿದ್ರೆ 5 ವರ್ಷ ಸಿಎಂ ಆಗಿರುತ್ತಿದ್ದೆ : ಹೆಚ್.ಡಿ ಕುಮಾರಸ್ವಾಮಿ

ಕುಮಾರಸ್ವಾಮಿಗೆ ಸಹಿಸಲು ಆಗುತ್ತಿಲ್ಲ

ಜಿಲ್ಲೆಯಲ್ಲಿ 6 ಜನ ಒಕ್ಕಲಿಗರು ಗೆದ್ದಿದ್ದನ್ನು ಕುಮಾರಸ್ವಾಮಿ ಅವರಿಗೆ ಸಹಿಸಲು ಆಗುತ್ತಿಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್, ಚಲುವರಾಯಸ್ವಾಮಿ ಬಗ್ಗೆ ಹರಿಹಾಯ್ದರೇ ಅನುಕೂಲ ಆಗುತ್ತೆ ಅಂತ ಮಾತನಾಡುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಟಕ್ಕರ್ ಕೊಟ್ಟರು.

ಹೆಚ್ ಡಿಕೆಯನ್ನ ರೈತನ ಮಗ ಅಂತಾರಾ?

ದೇವೇಗೌಡರನ್ನು ರೈತನ ಮಗ ಅಂತಾರೆ. ನಾನು ಒಬ್ಬ ಸಾಮಾನ್ಯ ರೈತನ ಮಗ. ಆದರೆ, ಕುಮಾರಸ್ವಾಮಿಯರನ್ನು ರೈತನ ಮಗ ಅಂತಾರಾ? ದೇವೇಗೌಡರ ಮಗ ಅಂತಾರೆ. ಕುಮಾರಸ್ವಾಮಿಯವರಿಗೆ ಒಳ್ಳೆಯದಾಗಲಿ, ಸಂದರ್ಭ ಬಂದಾಗ ಉತ್ತರ ಕೊಡುತ್ತೇನೆ ಎಂದು ಛೇಡಿಸಿದರು.

RELATED ARTICLES

Related Articles

TRENDING ARTICLES