Sunday, May 19, 2024

ಕಾಲಿಟ್ಟಲೆಲ್ಲಾ ಕೆಸರು, ಹೈರಾಣದ ಊರಿನ ಗ್ರಾಮಸ್ಥರು

ತುಮಕೂರು : ಕಾಮಗಾರಿಯವರು ತಡೆ ಇಡಿದಿರುವ ಹಿನ್ನೇಲೆ ಕೆಸರು ಗದ್ದೆಯಂತೆ ಆಗಿರುವ ಕಾಚಿಹಳ್ಳಿ ರಸ್ತೆ.

ಹೌದು, ಕಾಲಿಟ್ಟರೆ ಮೊಣಕಾಲವರೆಗೂ ಕೆಸರು ಕುಣಿಗಲ್ ತಾಲೂಕಿನ ಉಜ್ಜನಿ ಬಳಿಯಲ್ಲಿರುವ ಕಾಚಿಹಳ್ಳಿ ರಸ್ತೆ ಕಾಮಗಾರಿ ತಡೆ ಇಡಿದಿದ್ದಾರೆ ಎಂದು ಗ್ರಾಮ ಪಂಚಾಯಿತಿಯ ಸದಸ್ಯೆ ಪತಿಯೇ ಶಾಸಕ ಡಾ.ರಂಗನಾಥ್ ರವರ ಮೇಲೆ ಆರೋಪ ಮಾಡಿರುವ ಘಟನೆ ಕುಣಿಗಲ್ ತಾಲೂಕಿನ ಉಜ್ಜನಿಯಲ್ಲಿ ನೆಡೆದಿದೆ.

ಕೆಸರು ರಸ್ತೆಯಿಂದ ಹೈರಾಣಾಗಿರುವ ಗ್ರಾಮಾಸ್ಥರು. 

ಕಾಚಿಹಳ್ಳಿ ರಸ್ತೆಯ ಅವಾಂತರ ಅಗಿದೆ ಸುಮಾರು ನೂರು ಮೀಟರ್ ನಷ್ಟು ಸಂಪೂರ್ಣ ಕೆಸರು ಇರುವುದರಿಂದ ಗ್ರಾಮಾಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ, ಹಾಗೂ ಮೊಣಕಾಲವರೆಗೂ ಕೆಸರು ಇರುವುದರಿಂದ ವಾಹನಗಳ ಓಡಾಟಾವು ಕೂಡ ಬಂದಾಗಿದೆ.

ಇದನ್ನು ಓದಿ :ಉಚಿತ ಸಾರಿಗೆ: ಇದುವರೆಗೆ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ?

ಅದರಿಂದ ತುಂಬಾ ತೊಂದರೆ ಅನುಭವಿಸುತ್ತಿರುವ ಗ್ರಾಮಸ್ಥರು. ಕಾಚಿಹಳ್ಳಿಯ ನೂರು ಮೀಟರ್ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದೇ‌ ಈ ಅವ್ಯವಸ್ಥೆಗೆ ಕಾರಣ ಎನ್ನುತ್ತಿರುವ ಗ್ರಾಮಸ್ಥರು. ಅಷ್ಟೇ ಅಲ್ಲದೆ ಚರಂಡಿಯ ವಾಸನೆಯಿಂದ ತುಂಬಾ ತೊಂದರೆ ಆಗುತ್ತಿದ್ದು,

ಆದಷ್ಟು ಬೇಗ ರಸ್ತೆ ಮಾಡಿಸಿಕೊಡಿ ಎಂದು ಗ್ರಾಮಸ್ಥರ ಒತ್ತಾಯ.

ತಡೆಗೆ ಮೌಕಿಕ ಆದೇಶ ನೀಡಿದ್ದಾರೆ ಎಂದು ಶಾಸಕ ಡಾ.ರಂಗನಾಥ್ ರವರ ಮೇಲೆ ಗ್ರಾಮಸ್ಥರು ಆರೋಪವನ್ನು ಮಾಡಿದ್ದಾರೆ. ಶಾಸಕ ರಸ್ತೆ ಕಾಮಗಾರಿ ಮುಂದುವರೆಸಿ ಗೌರವ ಉಳಿಸಿಕೊಳ್ಳಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES