ಬೆಂಗಳೂರು : 80 ಸೀಟು ತಗೊಂಡು ನೀವು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮನೆ ಬಳಿ ಹೋಗಿ ಕಾದಿಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಇದ್ದಾಗ ರಾಜ್ಯದ ಜನರು ನಿಮಗೆ ಆಶೀರ್ವಾದ ಮಾಡಿದ್ದರೇ? ಎಂದು ಗುಡುಗಿದರು.
ಹಿಂದೆ ನೀವು ಎಲ್ಲ ಭಾಗ್ಯಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿರಲಿಲ್ಲ. 2013ರಲ್ಲಿ ನಮ್ಮಲ್ಲಿನ ಒಡುಕುಗಳಿಂದ ನೀವು ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಇವಾಗ ನೀವು ಗೆದ್ದಿದ್ದೀರಿ ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ನಿಮ್ಮನ್ನ ವಿಪಕ್ಷ ನಾಯಕ ಮಾಡಲ್ಲ : ಯತ್ನಾಳ್ ಗೆ ರಾಜಣ್ಣ ಕೌಂಟರ್
ಆಪರೇಷನ್ ಮಾಡಿದ್ದೇ ನೀವು
ಆಪರೇಷನ್ ಕಮಲ ಅಂತೀರಲ್ಲ ಈ ಹಿಂದೆ ಕೆಲವರು ರಾಜೀನಾಮೆ ಕೊಟ್ಟಿದ್ದರು. ಇದರಲ್ಲಿ ಯಾವ ಆಪರೇಷನ್ ಬಂತು? ಆ ರೀತಿ ನೋಡುವುದಾದರೆ ಮೊದಲ ಬಾರಿಗೆ ಆಪರೇಷನ್ ಮಾಡಿದ್ದೇ ಕಾಂಗ್ರೆಸ್ ಎಂದು ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ಕೌಂಟರ್ ಕೊಟ್ಟರು.
ವರ್ಗಾವಣೆ, ಹಿಂದಿನ ಸರ್ಕಾರ ಅಕ್ರಮ ತನಿಖೆ ಬಗ್ಗೆ ಮಾತಾಡುತ್ತಿದ್ದಾರೆ. ನಾವು ಸಿಎಂ ಭ್ರಷ್ಟಾಚಾರ ಮಾಡಿದ್ದಾರೆ ಅಂತ ಹೇಳಿಲ್ಲ. ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಂತ ಹೇಳಿದ್ದು. ನಾನು ಸಿಎಂ ಆಗಿದ್ದಾಗ ಎಸ್ಐಟಿ ರಚಿಸಿ ತನಿಖೆ ಮಾಡಿಸಿದ್ದೇವೆ. ನಿಮ್ಮ ಸರ್ಕಾರ ವಿರುದ್ಧದ ಎಲ್ಲವನ್ನೂ ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ನಾವು ತನಿಖೆಯನ್ನೇ ಮಾಡಿಸಿಲ್ಲ ಎಂದು ಹೇಳಬೇಡಿ ಎಂದು ಗುಡುಗಿದರು.