Sunday, December 8, 2024

ನಿಮ್ಮನ್ನ ವಿಪಕ್ಷ ನಾಯಕ ಮಾಡಲ್ಲ : ಯತ್ನಾಳ್ ಗೆ ರಾಜಣ್ಣ ಕೌಂಟರ್

ಬೆಂಗಳೂರು: ನಿಮ್ಮನ್ನ ವಿರೋಧ ಪಕ್ಷದ ನಾಯಕರನ್ನಾಗಿ ಮಾಡೋದಿಲ್ಲ ಪದೇ ಪದೇ ಯಾಕೆ ಎದ್ದು ನಿಲ್ಲುತ್ತೀರಿ ಸುಮ್ಮನೆ ಕುಳಿತುಕೊಳ್ಳಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್​ಗೆ ಸಚಿವ ಕೆ.ಎನ್ ರಾಜಣ್ಣ ಟಾಂಗ್ ನೀಡಿದ್ದಾರೆ. 

ವಿಧಾನಸಭೆಯಲ್ಲಿಂದು ಯತ್ನಾಳ್ ಮಾತಿಗೆ ಉತ್ತರಿಸಿದ ಸಚಿವ ಕೆ.ಎನ್ ರಾಜಣ್ಣ ನಿಮ್ಮನ್ನ ವಿಪಕ್ಷ ನಾಯಕ ಮಾಡಲ್ಲ ಸುಮ್ಮನೆ ಯಾಕೆ ತ್ರಾಸ್ ತೆಗೆದುಕೊಳ್ಳತ್ತೀರಾ ಕುಳಿತುಕೊಳ್ಳಿ ಎಂದು ಕೆ.ಎನ್ ರಾಜಣ್ಣ ಕೌಂಟರ್ ಕೊಟ್ಟಿದ್ದಾರೆ.

ನೀವು ಮೊದಲು ಮೋದಿ ಬಳಿ ಹೋಗಿ ಜಿಎಸ್​ಟಿ ಹಣ ಕೇಳಿ ಅವರ ಬಗ್ಗೆ ಮಾತನಾಡಿದ್ರೆ ನಿಮ್ಮಗೆ ವಿಪಕ್ಷ ಸ್ಥಾನ ಸಿಗುವಿದಿಲ್ಲ ಎಂದು ಹೇಳಿದ್ದರು

ವರ್ಗಾವಣೆ ರೇಟ್ ಕಾರ್ಡ್ ಭಾರೀ ಸದ್ದು ಮಾಡಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ಶಾಸಕ ಕೋನರೆಡ್ಡಿ ನಡುವೆ ವಾಕ್ಸಮರ ನಡೆದಿದೆ. ‘ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ‘ರೇಟ್ ಕಾರ್ಡ್ ನಮ್ಮದಲ್ಲ. ಅದು ಯತ್ನಾಳ್‌ಗೆ ಸೇರಿದ್ದು. ಯತ್ನಾಳ್ ಅವರೇ ಸಿಎಂ ಕುರ್ಚಿಗೆ 2,500 ಕೋಟಿ ರೂಪಾಯಿ ಕಮಿಷನ್ ಎಂದಿದ್ದರು’ ಎಂದು ಕೋನರೆಡ್ಡಿ ಆರೋಪಿಸಿದರು. ಇದಕ್ಕೆ ದಾಖಲೆ ನೀಡಿ ಎಂದು ಯತ್ನಾಳ್ ತಿರುಗೇಟು ನೀಡಿದರು.

 

RELATED ARTICLES

Related Articles

TRENDING ARTICLES