Monday, December 23, 2024

AAP ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಎಎಪಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯಾಗಿದೆ.

ನೂತನ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ಅವರು ನೇಮಕವಾಗಿದ್ದಾರೆ. ಇಬ್ಬರು ಸಂಘಟನಾ ಪ್ರಧಾನಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಉತ್ತರ, ದಕ್ಷಿಣಕ್ಕೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಉತ್ತರ ಕರ್ನಾಟಕಕ್ಕೆ ಅರ್ಜುನ್ ಪರಪ್ಪ ಅಲಗೀಗೌಡರ್, ದಕ್ಷಿಣ ಕರ್ನಾಟಕಕ್ಕೆ ಬಿ.ಟಿ.ನಾಗಣ್ಣ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ : ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದ ಜಿ.ಟಿ ದೇವೇಗೌಡ

ಎಎಪಿ ರಾಷ್ಟ್ರೀಯ ಘಟಕದಿಂದ ಅಧಿಕೃತ ಆದೇಶ ಬಂದಿದೆ. ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿರೆಡ್ಡಿಯವರು ಬದಲಾವಣೆಯಾಗಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಅಧ್ಯಕ್ಷರ ಬದಲಾವಣೆಯಾಗಿದೆ.

ಚಂದ್ರುಗೆ ಪೃಥ್ವಿರೆಡ್ಡಿ ಅಭಿನಂದನೆ

ನೂತನ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರಿಗೆ ಪೃಥ್ವಿರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದ ಜನರ ಪ್ರೀತಿಯನ್ನು ಗಳಿಸಿದ ನಿಸ್ವಾರ್ಥ, ಬದ್ಧತೆಯ ವ್ಯಕ್ತಿ ಎಎಪಿ ಕರ್ನಾಟಕ ಮತ್ತು ನಮ್ಮ ರಾಜ್ಯದ ಜನತೆಗೆ ಬಹುದೊಡ್ಡ ಆಸ್ತಿ. ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ನೇಮಕಗೊಂಡ ಬಿ.ಟಿ.ನಾಗಣ್ಣ ಮತ್ತು ಅರ್ಜುನ್ ಹಲಗಿಗೌಡರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES