ಬೆಂಗಳೂರು : ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಒತ್ತಾಯಿಸಿ 108 ಆ್ಯಂಬುಲೆನ್ಸ್ ಚಾಲಕರು ನಡೆಸುತ್ತಿದ್ದ ಮುಷ್ಕರ ಸಚಿವರ ಭರವಸೆ ಮೇರೆಗೆ ಹಿಂಪಡೆದಿದ್ದಾರೆ.
ಇದನ್ನೂ ಓದಿ : ಇಂದು ಬೆಂಗಳೂರು ಯುನಿವರ್ಸಿಟಿ ಬಂದ್ : ವಿದ್ಯಾರ್ಥಿಗಳಿಂದ ಪ್ರತಿಭಟನೆ
ವೇತನ ಬಾಕಿಯಿದ್ದ ಹಿನ್ನಲೆ 108 ಆ್ಯಂಬುಲೆನ್ಸ್ ಚಾಲಕರು, ಟೆಂಡರ್ ಹೊಂದಿರುವ ಜಿವಿಕೆ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ವಿರುದ್ದ ಸಿಡಿದೆದಿದ್ದು ಜುಲೈ 8 ರಂದು ಆ್ಯಂಬುಲೆನ್ಸ್ಗಳನ್ನು ರಸ್ತೆಗಿಳಿಸದೆ ಸಾಮೂಹಿಕ ರಜೆ ಹಾಕುವಂತೆ ಕರೆ ನೀಡಿದ್ದರು.
ಈ ಹಿನ್ನೆಲೆ, ಜುಲೈ 7 ರಂದು ಸಿಬ್ಬಂದಿಗಳು ಮತ್ತು ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಸಭೆ ನಡೆಸಿ ಬಾಕಿ ಮೊತ್ತ ಬಿಡುಗಡೆಗೊಳಿಸುವ ಭರವಸೆಯನ್ನು ನೀಡಿದ್ದರು,
ಸೋಮವಾರ ಸಂಜೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಯಿತು. ಸಭೆಯ ಬಳಿಕ, ಸಚಿವರ ಭರವಸೆಯಂತೆ ಆರೋಗ್ಯ ಇಲಾಖೆ ಮೊದಲ ಕಂತಿನಲ್ಲಿ 14 ಕೋಟಿ ಬಿಡುಗಡೆ ಮಾಡಿದ್ದು ಇನ್ನೂ ಬಾಕಿ ವೇತನವನ್ನು ಇಂದು ಸಂಜೆ ಒಳಗೆ ಪಾವತಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.