Monday, December 23, 2024

ಸಿಎಂ ಆರೋಗ್ಯ ಚೇತರಿಕೆ : ಇಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗಿ

ಬೆಂಗಳೂರು :  ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದೆ. ಕೆಮ್ಮು ಹಾಗೂ  ಜ್ವರ ಕಡಿಮೆಯಾಗಿದ್ದು, ಕಫ ಮುಂದುವರೆದಿದೆ. ಆದರೂ, ಸದ್ಯ ಆರೋಗ್ಯ ಸ್ವಲ್ಪ ಸುಧಾರಿಸಿರುವ ಕಾರಣ ಇಂದಿನ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಸುರಕ್ಷಿತ: ಸಚಿವ ಹೆಚ್​.ಕೆ.ಪಾಟೀಲ್​

ಶೀತ,ಜ್ವರ ಮತ್ತು ಕೆ್ಮ್ಮಿನ ಸಮಸ್ಯೆಯಿಂದ ಕಳೆದ ಎರಡು ದಿನಗಳಿಂದ ಯಾರನ್ನೂ ಭೇಟಿಯಾಗದೇ ಬೆಂಗಳೂರಿನ ತಮ್ಮ ನಿವಾಸದಲ್ಲೇ ಉಳಿದು ವಿಶ್ರಾಂತಿ ಪಡೆದಿದ್ದರು.

ಭಾನುವಾರ ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಕೆಲ ದಿನಗಳವರೆಗೆ ದೂರದ ಊರುಗಳಿಗೆ ಪ್ರಯಾಣಿಸದಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನಾರೋಗ್ಯದ ನಡುವೆಯೂ ಕಳೆದ ಶುಕ್ರವಾರ 2.45 ಗಂಟೆಗಳ ಸುಧೀರ್ಘ ಭಾಷಣ ಮಾಡಿದ್ದ ಬಳಿಕ ಸಂಜೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಜ್ವರ ಜಾಸ್ತಿಯಾಗಿತ್ತು. ಸದ್ಯ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು ಇಂದಿನ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

 

RELATED ARTICLES

Related Articles

TRENDING ARTICLES