Thursday, May 16, 2024

ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಸುರಕ್ಷಿತ: ಸಚಿವ ಹೆಚ್​.ಕೆ.ಪಾಟೀಲ್​

ಗದಗ: ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಯಾತ್ರಿಗಳು ಸುರಕ್ಷಿತವಾಗಿದ್ದು ಯಾತ್ರಿಕರ ಕುಟುಂಬಸ್ಥರ ಜೊತೆ ಮಾತನಾಡಿದ್ದೇನೆ. ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಅಮರನಾಥ್ ಆಡಳಿತ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದು ಕಾನೂನು & ಪ್ರವಾಸೋಧ್ಯಮ ಸಚಿವ ಹೆಚ್ .ಕೆ ಪಾಟೀಲ ತಿಳಿಸಿದರು.

ಇದನ್ನೂ ಓದಿ: ನಟ ಸುದೀಪ್​, ನಿರ್ಮಾಪಕ ಕುಮಾರ್​ ಮಧ್ಯೆ ವಾರ್​​.!: ಸುದೀಪ್​​ ಪರ ಜಾಕ್​ ಮಂಜು ಬ್ಯಾಟಿಂಗ್​

ಗದಗದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಅಮರನಾಥ್ ಆಡಳಿತ ಸ್ಪಂದಿಸಿದೆ, ನಿನ್ನೆಯ ದಿನ ಪಂಚತರಣಿ ಕ್ಯಾಂಪಿನಲ್ಲಿ ಕನ್ನಡಿಗ ಪ್ರವಾಸಿಗರನ್ನು ಸುರಕ್ಷಿತವಾಗಿ ಇಡಲಾಗಿತ್ತು, ಈ ವಿಚಾರವಾಗಿ ಯಾತ್ರಿಕರ ಕುಟುಂಬಸ್ಥರ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿಯವರ ಜೊತಗೆ ಮಾತನಾಡಿದ್ದು ಅಗತ್ಯ ಕ್ರಮಕ್ಕೆ ಸೂಚಿಸಿದ್ದೇನೆ.‘

ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ತಂಡ ರಚಿಸಿ ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗ ಪ್ರವಾಸಿಗರ ನೆರವಿಗೆ ಧಾವಿಸಲು ಸೂಚಿಸಿದ್ದಾರೆ, ಈಗಾಗಲೇ ಕೆಲ ಅಧಿಕಾರಿಗಳು ದೆಹಲಿ, ಶ್ರೀನಗರ ಸೇರಿ ವಿವಿಧೆಡೆಗೆ ತೆರಳಿದ್ದಾರೆ.

ಕರ್ನಾಟಕ ಭವನ ರೆಸಿಡೆನ್ಸಿ ಅಧಿಕಾರಿಗಳು  ಚುರುಕಿನಿಂದ ಕೆಲಸ ಮಾಡುತ್ತಿದ್ದು ಪಂಚತರಣಿ ಕ್ಯಾಂಪಿನಿಂದ ನೀಲ್ ಗ್ರತ್ ಅನ್ನೊ ಸ್ಥಳಕ್ಕೆ ಗದಗ ಯಾತ್ರಿಕರು ಕರೆತರಲಾಗಿದೆ, ಅಲ್ಲಿಂದ ಶ್ರೀನಗರದ ಮೂಲಕ ಬೆಂಗಳೂರಿಗೆ ಬರಬಹುದು ಎಂದು ವಿರವರಣೆ ನೀಡಿದರು.

RELATED ARTICLES

Related Articles

TRENDING ARTICLES