Sunday, May 19, 2024

ಇಂಧನ ಇಲಾಖೆಯ 800 ಕ್ಕೂ ಹೆಚ್ಚು ಸಿಬ್ಬಂದಿಗಳ ವರ್ಗಾವಣೆ: ಹೆಚ್​ಡಿಕೆ ಆರೋಪ ನಿಜಾನ?

ಬೆಂಗಳೂರು: ಇಂಧನ  ಇಲಾಖೆಯ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ 800 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.

ಇದನ್ನೂ ಓದಿ: ಜೈನ ಮುನಿಗಳ ಭೀಕರ ಹತ್ಯೆ ಖಂಡನೀಯ ; ಧರ್ಮದರ್ಶಿ ಡಾ.ವೀರೇಂದ್ರ ಹೆಗ್ಗಡೆ

ಜುಲೈ 3ರಂದು ಒಂದೇ ದಿನ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯಲ್ಲಿ 800ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

ಇದೇ ವಿಚಾರವಾಗಿ ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ 10 ಕೋಟಿ ರೂ. ಕಮಿಷನ್​​ ವರ್ಗಾವಣೆ ದಂಧೆ ಆರೋಪ ಬೆನ್ನಲ್ಲೇ ಇಂಧನ ಇಲಾಖೆಯಲ್ಲಿ 800 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಇಲಾಖೆಯ ಗ್ರೂಪ್ C, D ದರ್ಜೆಯ ಸಿಬ್ಬಂದಿಯ ವರ್ಗಾವಣೆ ಮಾಡಲಾಗಿದ್ದು ವರ್ಗಾವಣೆಗೆ ನೌಕರರ ಅಸಮಾಧಾನ ವ್ಯಕ್ತವಾಗಿದೆ.

ಇಂಧನ ಇಲಾಖೆಯಲ್ಲಿ ಸಾರ್ವತ್ರಿಕ ವರ್ಗಾವಣೆ ಹೆಸರಲ್ಲಿ ಪ್ರತಿ ವರ್ಗಾವಣೆಗೂ ಇಂತಿಷ್ಟು ದರ ನಿಗಧಿ ವರ್ಗಾವಣೆ ನಡೆಸಲಾಗುತ್ತಿದೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಸತ್ಯಾನಾ? ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

RELATED ARTICLES

Related Articles

TRENDING ARTICLES