Sunday, May 12, 2024

ಶಿಥಿಲವಾದ ಶಾಲಾ ಮೇಲ್ಚಾವಣಿ : ಮಳೆಯಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಶಿವಮೊಗ್ಗ: ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಶಾಲೆ ಮೇಲ್ಚಾವಣಿ ಶಿಥಿಲವಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ವಿದ್ಯಾರ್ಥಿಗಳು ಶಾಲಾ ತರಗತಿಯಲ್ಲಿ ಛತ್ರಿ ಹಿಡಿದು ಪಾಠ ಕೇಳುವ ದುಸ್ಥಿತಿಯಲ್ಲಿ ಜಿಲ್ಲೆಯ ಕೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿದೆ.

ಇದನ್ನೂ ಓದಿ: ಇದೊಂದು ಜನ ವಿರೋಧಿ ಬಜೆಟ್​ : ಬಸವರಾಜ ಬೊಮ್ಮಾಯಿ ಕಿಡಿ

ಈ ಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿವರೆಗೆ 52 ಹೆಣ್ಣು ಮಕ್ಕಳು 73 ಜನ ಗಂಡು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಅಲ್ಲದೇ 6 ಜನ ಶಿಕ್ಷಕರು, ದ್ವಿತೀಯ ದರ್ಜೆ, ಓರ್ವ ಡಿ ಗ್ರೂಪ್ ನೌಕರ ಇದ್ದು 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ಶೇಕಡಾ 86 ರಷ್ಟು ಫಲಿತಾಂಶ ಪಡೆದಿದೆ.

ಆದರೆ, ಈ ಪ್ರೌಢಶಾಲೆಯ ದುರಾವಸ್ಥೆ ಹೇಳತೀರದಾಗಿದೆ.  ಶಾಲಾ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಮಳೆಯಲ್ಲಿ ಛತ್ರಿ ಹಿಡಿದು, ನೀರಿನಲ್ಲೇ ಪಾಠ ಕೇಳುವಂತಾಗಿದೆ.  ಈ ಬಗ್ಗೆ ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಕೂಡಾ ಗಮನಹರಿಸದೇ ಇರುವುದೇ ಈ ದುರಾವಸ್ಥೆಗೆ ಕಾರಣ ಎನ್ನಲಾಗುತ್ತಿದೆ.

ಕಳೆದ ವರ್ಷದಲ್ಲಿ ಈ ಶಾಲಾ ಮೇಲ್ಚಾವಣಿ ಶಿಥಿಲಗೊಂಡಿರುವ ಬಗ್ಗೆ ಸಚಿವ ಆರಗ  ಜ್ಞಾನೇಂದ್ರ ಮನವಿ ನೀಡಲಾಗಿತ್ತಂತೆ. ಮಳೆ ಹಾನಿ ಪರಿಹಾರದಡಿಯಲ್ಲಿ ಶಾಲೆಯ ಮೇಲ್ಛಾವಣಿ ದುರಸ್ಥಿಗೊಳಿಸುವ ಕಾಮಗಾರಿ ಪಟ್ಟಿಗೆ ಸೇರಿಸಿ ಅನುಮೊದನೆಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದ್ದು, ಈ ವರೆಗೂ ಮೇಲ್ಚಾವಣಿ ದುರಸ್ಥಿಯಾಗಿಲ್ಲ.

ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಮತ್ತು ಜಿಲ್ಲಾಧಿಕಾರಿಗಳು ಜಿಲ್ಲಾ ಶಿಕ್ಷಣಾಧಿಕಾರಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳ ರಕ್ಷಣೆಯೊಂದಿಗೆ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಯ ದುರಸ್ಥಿಗೆ ಮುಂದಾಗುವರೇ ಕಾದು ನೋಡಬೇಕಾಗಿದೆ.

RELATED ARTICLES

Related Articles

TRENDING ARTICLES