ದಾವಣಗೆರೆ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಪೆನ್ಡ್ರೈವ್ನಲ್ಲಿ ಏನಿದೆ ಅಂತ ತೋರಿಸಲಿ ಎಂದು ಶಾಸಕ ಬಸವಂತಪ್ಪ ಹೇಳಿದರು.
ಕುಮಾರಸ್ವಾಮಿ ಪೆನ್ಡ್ರೈವ್ ಪ್ರದರ್ಶನ ಕುರಿತು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪೆನ್ಡ್ರೈವ್ನಲ್ಲಿ ಏನಿದೆ ಅಂತ ತೋರಿಸಲಿ ಎಂದು ಹೇಳಿದರು.
ಪೆನ್ಡ್ರೈವ್ ಕೊಡಿ ಎಂದರೂ ಕೊಟ್ಟಿಲ್ಲ. ಸದನದಲ್ಲಿ ಪೆನ್ಡ್ರೈವ್ ಪ್ರದರ್ಶನ ಮಾಡಿ ಸುಮ್ಮನಾಗಿದ್ದಾರೆ. ಹಿರಿಯ ನಾಯಕರು ತೋರಿಸಿ ಅಂತ ಹೇಳಿದರೂ ಕುಮಾರಸ್ವಾಮಿ ತೋರಿಸಿಲ್ಲ ಎಂದು ಕುಟುಕಿದರು.
ಇದನ್ನೂ ಓದಿ : ನಾನು ಮಾಂಸ ತಿಂತೀನಿ, ನೀವು ಬೇಡ ಅಂದ್ರೂ ನಿಲ್ಲಿಸಲ್ಲ : ಕೆ.ಎನ್ ರಾಜಣ್ಣ
ದೀನ-ದಲಿತರ ಬಜೆಟ್
14ನೇ ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಐದು ಗ್ಯಾರಂಟಿಗಳನ್ನ ಜಾರಿಗೊಳಿಸಿದ್ದಾರೆ. ಬಡವರ, ದೀನ ದಲಿತರ ಬಜೆಟ್ ಆಗಿದೆ. ಇನ್ನು ಎಸ್.ಸಿ.ಸಿ.ಪಿ(SCCP), ಟಿ.ಎಸ್.ಪಿ (TSP) ಯೋಜನೆ ಬಲಪಡಿಸಲಾಗಿದೆ. ತಿದ್ದುಪಡಿ ತಂದು ಹಣ ಸದ್ಬಳಕೆ ಬಳಕೆ ಮಾಡಲಾಗಿದೆ. ದುರ್ಬಳಕೆ ಆಗುವುದನ್ನ ತಡೆಯಲಾಗಿದೆ. ಸಿದ್ದರಾಮಯ್ಯ ಬಜೆಟ್ನಲ್ಲಿ ಭರವಸೆ ಈಡೇರಿಸಿದ್ದಾರೆ ಎಂದರು.
ಏತ ನೀರಾವರಿಗೆ ಚುರುಕು
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅಧ್ಯಕ್ಷತೆ ಕೆಡಿಪಿ ಸಭೆ ನಡೆಯಿತು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಏತ ನೀರಾವರಿ ಸೇರಿದಂತೆ ವಿವಿಧ ಕಾಮಗಾರಿ ಚುರುಕಿಗೆ ಸೂಚನೆ ನೀಡಲಾಯಿತು. ಶಾಸಕ ದೇವೆಂದ್ರಪ್ಪ, ಬಸವಂತಪ್ಪ, ಬಸವರಾಜ್, ಬಿಪಿ ಹರೀಶ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಡಾ. ಅರುಣ್ ಉಪಸ್ಥಿತರಿದ್ದರು.