Sunday, January 19, 2025

ಮೊಬೈಲ್​ನಲ್ಲಿ ಮಾತನಾಡುತ್ತ ಬಸ್ ಡ್ರೈವ್ ಮಾಡಿದ ಚಾಲಕ: 5 ಸಾವಿರ ದಂಡ

ಶಿವಮೊಗ್ಗ: ಮೊಬೈಲ್​ ನಲ್ಲಿ ಮಾತನಾಡುತ್ತ ಬಸ್ ಚಾಲನೆ ಮಾಡಿದ ಚಾಲಕನಿಗೆ ಟ್ರಾಫಿಕ್ ಪೊಲೀಸರು 5 ಸಾವಿರ ದಂಡ ವಿಧಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇದನ್ನೂ ಓದಿ: ಇಂದಿನಿಂದ ವಿದ್ಯಾರ್ಥಿಗಳಿಂದ ಉಚಿತ ಹಾಗೂ ರಿಯಾಯಿತಿ ಬಸ್​ಪಾಸ್​ಗೆ ಅರ್ಜಿ ಆಹ್ವಾನ

ಗಜಾನನ ಬಸ್ ಚಾಲಕ ಮನ್ಸೂರ್. ಜು.6 ರಂದು ಶಿವಮೊಗ್ಗ – ತೀರ್ಥಹಳ್ಳಿ ನಡುವೆ ಸಂಚರಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾ ಡ್ರೈವಿಂಗ್ ಮಾಡುತ್ತಿದ್ದ. ಡ್ರೈವರ್ ಪಕ್ಕದಲ್ಲಿ ಕೂಳಿತಿದ್ದ ಪ್ರಯಾಣಿಕ ತನ್ನ ಮೊಬೈಲ್​ನಲ್ಲಿ ವಿಡಿಯೋ ಚಿತ್ರಿಕರಣ ಮಾಡಿ ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದರು.

ಈ ವಿಡಿಯೋವನ್ನು ಪರಿಶೀಲಿಸಿದ ಟ್ರಾಫಿಕ್​  ಪೊಲೀಸರು ಸಂಚಾರ ನಿಯಮ ಉಲ್ಲಂಘಸಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದಕ್ಕೆ 5,000 ರೂ. ದಂಡ ವಿಧಿಸಿದ್ದಾರೆ.

RELATED ARTICLES

Related Articles

TRENDING ARTICLES