Sunday, October 6, 2024

ಸಿದ್ದರಾಮಯ್ಯ ಹಿಂದೂ ವಿರೋಧಿ ಬಜೆಟ್ ಮಂಡಿಸಿದ್ದಾರೆ : ಎನ್. ರವಿಕುಮಾರ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ‌ ಕಾರ್ಯದರ್ಶಿ ಮತ್ತು ಎಂಎಲ್‌ಸಿ ಎನ್. ರವಿಕುಮಾರ್ ಕುಟುಕಿದರು.

ರಾಜ್ಯ ಬಜೆಟ್ ಕುರಿತು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅಲ್ಪಸಂಖ್ಯಾತ ಕೇಂದ್ರಿತ ಬಜೆಟ್ ಎಂದು ಕುಟುಕಿದರು.

ಬಜೆಟ್ ನಲ್ಲಿ ಕೇವಲ ಅಲ್ಪಸಂಖ್ಯಾತರಿಗೆ ಭರಪೂರ ಯೋಜನೆ ಕೊಟ್ಟಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಅನುದಾನವನ್ನು ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ. ಯಾವುದೇ ಮಠ, ದೇವಸ್ಥಾನಗಳಿಗೆ ಅನುದಾನ‌ ಕೊಟ್ಟಿಲ್ಲ. ಇದು ಹಿಂದು ವಿರೋಧಿ ಬಜೆಟ್ ಆಗಿದೆ ಎಂದು ಛೇಡಿಸಿದರು.

ಇದನ್ನೂ ಓದಿ : ಪ್ರೌಢಶಾಲಾ ಮಕ್ಕಳಿಗೆ ಇನ್ನುಮುಂದೆ ಮೊಟ್ಟೆ ಭಾಗ್ಯ

ಲವ್ ಜಿಹಾದ್ ಗೆ ಒತ್ತು ಕೊಡ್ತಿದೆ

ಆನ್ ಲೈನ್ ಮದುವೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಲವ್ ಜಿಹಾದ್ ಗೆ ಒತ್ತನ್ನು ಕೊಡುತ್ತದೆ. ಕೇವಲ ಗ್ಯಾರಂಟಿ ಜಾರಿ‌ ಮಾಡುವ ಬಜೆಟ್ ಆಗಿದೆ. ಐಟಿ-ಬಿಟಿ‌ಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದು ಉದ್ಯೋಗ ವಿರೋಧಿ ಬಜೆಟ್ ಆಗಿದೆ. ಎನ್ಇಪಿ(NEP)ಯನ್ನು ಕೇಂದ್ರ ಜಾರಿ ಮಾಡಿತ್ತು. 30 ವರ್ಷದ ನಂತರ ಶಿಕ್ಷಣದಲ್ಲಿ ಹೊಸ ನೀತಿಯನ್ನು ಕೇಂದ್ರ ಜಾರಿ ಮಾಡಿತ್ತು. ಎನ್ಇಪಿ ರದ್ದು ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಶಿಕ್ಷಣ ವಿರೋಧಿ ಬಜೆಟ್ ಇದು ಎಂದು ಚಾಟಿ ಬೀಸಿದರು.

ಜನರ ಮೇಲೆ ತಲಾ 15 ಸಾವಿರ ಸಾಲ

ಇದೊಂದು ಸಾಲದ ಬಜೆಟ್ ಆಗಿದೆ. 86 ಸಾವಿರ ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾರೆ. ಇದು ರಾಜ್ಯದ ಜನರ ಮೇಲೆ ತಲಾ 15 ಸಾವಿರ ಸಾಲ ಹೊರಿಸಿದೆ. ರಾಜ್ಯದ ಮೂಲಭೂತ ಸೌಕರ್ಯಗಳಿಗೆ ಶೂನ್ಯ ಒತ್ತನ್ನು ಕೊಡಲಾಗಿದೆ. ಕೇಂದ್ರ ಸರ್ಕಾರ 5 ಕಿಲೋ ಅಕ್ಕಿ ಕೊಡ್ತಿದೆ ಅಂತ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ, ಅದಕ್ಕೆ ಸ್ವಾಗತ. ನಮ್ಮ ಸರ್ಕಾರದ ಎಪಿಎಂಸಿ ಕಾಯ್ದೆಯನ್ನು ತಂದಿತ್ತು. ಈ ಬಜೆಟ್ ನಲ್ಲಿ ಎಪಿಎಂಸಿ ಕಾಯ್ದೆಯನ್ನು ರದ್ದು ಪಡಿಸಿದ್ದಾರೆ. ಹೀಗಾಗಿ,‌ ಇದು ರೈತ ವಿರೋಧಿ ಬಜೆಟ್ ಎಂದು ಗುಡುಗಿದರು.

RELATED ARTICLES

Related Articles

TRENDING ARTICLES