Sunday, May 19, 2024

ವಿದೇಶದಲ್ಲೂ ರಾರಾಜಿಸಲಿದೆ ‘ನಂದಿನಿ’ : ಮೊದಲ ಔಟ್ಲೆಟ್ ಆರಂಭಿಸಲಿರುವ ಕೆಎಂಎಫ್

ಬೆಂಗಳೂರು: ದೇಶದ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಸದ್ದು ಮಾಡಲು ಸಜ್ಜು ಆಗಿದೆ.

ರಾಜ್ಯದ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು ( ಕೆಎಂಎಫ್) ದುಬೈನ ಕರಾಮ ನಗರದಲ್ಲಿ ನಂದಿನಿ ಕೆಫೆ ಮೂ ಆರಂಭಿಸಲು ಸಕಲ ಸಿದ್ದತೆಗಳನ್ನ ಮಾಡಿಕೊಂಡಿದೆ. ಈಗಾಗಲೇ ದೇಶ ವ್ಯಾಪಿ ಅತ್ಯುತ್ತಮ ಬ್ರ್ಯಾಂಡ್ ಖ್ಯಾತಿ ಹೊಂದಿರೋ ನಂದಿನಿ ವಿದೇಶಗಳಲ್ಲೂ ರಾರಾಜಿಸಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್‌ ಮೇಲೆ ರಾಜ್ಯದ ಜನತೆಯ ನಿರೀಕ್ಷೆಗಳೇನು? ಹೀಗಿದೆ ಪ್ರಾಂತ್ಯವಾರು ಮಾಹಿತಿ

ಇನ್ನೂ ಹಾಲಿನ ಉತ್ಪನಗಳ ಮಾರಾಟದ ಜೊತೆ ಜೊತೆಗೆ ಕೆಫೆ ಗಳಿಂದಲೂ ಫೇಮಸ್ ಆಗಿದ್ದ ನಂದಿನಿ ಕುಳಿತು ಸವಿಯುವಂತಹ ‘ನಂದಿನಿ ಕೆಫೆಗಳನ್ನು ವಿದೇಶದ್ಯಾಂತ ಆರಂಭಿಸಲು ಕೆಎಂಎಫ್ ಯೋಜನೆ ಹಾಕಿಕೊಂಡಿದೆ.

ಪ್ರಸ್ತುತ ರಾಜ್ಯ ಹಾಗೂ ಹೊರ ರಾಜ್ಯ ಸೇರಿ ಒಟ್ಟು 21 ನಂದಿನಿ ಕೆಫೆ ಮೂ ನಿರ್ಮಾಣ ಮಾಡಿದ್ದು, ರಾಜ್ಯದಲ್ಲಿ 13,ಹೊರ ರಾಜ್ಯದಲ್ಲಿ 8 ನಂದಿನಿ ಕೆಫೆ ಮೂ ಗಳನ್ನು ಕೆಎಂಎಫ್ ನಿರ್ಮಿಸಿದೆ. ನಿನ್ನೆ ನಡೆದ ಹಾಲು ಒಕ್ಕೂಟಗಳ ಮಹಾಮಂಡಳಿ ಸಭೆಯಲ್ಲಿ ಯೋಜನೆಗೆ ಗ್ರೀನ್ ಸಿಗ್ನಲ್ ಡಿಮ್ಯಾಂಡ್ ಹೆಚ್ಚಾದ ಹಿನ್ನೆಲೆ ಹೆಚ್ಚು ಮಳಿಗೆ ತೆರೆಯಲು ಪ್ಲಾನ್ ಮಾಡಿದೆ.

RELATED ARTICLES

Related Articles

TRENDING ARTICLES