Monday, May 20, 2024

ಹೋಂಡಾ ಕಂಪೆನಿಯ ಬಿಡಿಬಾಗಗಳ ನಕಲು ಮಾಡಿ ಮಾರಾಟ: ಆರೋಪಿಗಳ ಬಂಧನ

ಬೆಂಗಳೂರು : ಪ್ರತಿಷ್ಠಿತ ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನ ನಕಲು ಮಾಡುತ್ತಿದ್ದ ಕಾರ್ಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಡೆದಿದೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್ ನ್ಯೂಸ್ : ಟ್ರಾಫಿಕ್‌ ಫೈನ್‌ ಪಾವತಿಗೆ ಶೇ.50 ರಷ್ಟು ರಿಯಾಯಿತಿ

ದಾಳಿ ವೇಳೆ ಹೋಂಡಾ ಕಂಪನಿಯ ಹೆಸರಲ್ಲಿದ್ದ 1.5 ಲಕ್ಷ ಮೌಲ್ಯದ ಸೇಫ್ಟಿ ಗಾಡ್, ಪ್ಯಾಡ್ ಗ್ರಿಪ್ಪರ್ ಸೇರಿದಂತೆ ಹಲವು ಬಿಡಿ ಭಾಗಗಳು ಪತ್ತೆಯಾಗಿದ್ದು ಕಂಪನಿ ಎಂಆರ್ ಪಿ ದರದಲ್ಲೇ ಗ್ರಾಹಕರಿಂದ ಹಣ ಪಡೆದು ಒಂದು ಕಡೆ ಗ್ರಾಹಕರಿಗೆ ಇನ್ನೋಂದು ಕಡೆ ಹೊಂಡಾ ಕಂಪನಿಗೆ ವಂಚಕರು ವಂಚಿಸಿರುವುದು ಬೆಳಕಿಗೆ ಬಂದಿದೆ.

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದ ಡಾಲ್ ಫಿನ್ ಟ್ರೇಡರ್ ಕಂಪನಿಯಲ್ಲಿ ಈ ನಕಲಿ ಬಿಡಿಭಾಗಗಳು ತಯಾರಾಗುತ್ತಿತ್ತು ಈ ಬಗ್ಗೆ ಹೋಂಡಾ ಕಂಪನಿ ಅಧಿಕಾರಿಗಳೆ ಮಾಹಿತಿ ಕಲೆ ಹಾಕಿ ಪೊಲೀಸರಿಗೆ ತಿಳಿಸಿದ್ದಾರೆ. ‌ಸದ್ಯ ಮಾಹಿತಿ ಅನ್ವಯ ಡಾಲ್ ಫಿಮ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿ ಸುಮಾರು 1.5ಲಕ್ಷದ ಹೋಂಡಾ ಕಂಪನಿ ಹೆಸರಿನ ಬಿಡಿಭಾಗಗಳನ್ನ ಸ್ವಾಧೀನಪಡಿಸಿಕೊಂಡಿದ್ದು ಫ್ಯಾಕ್ಟರಿ ಮಾಲಿಕ ರಮೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

RELATED ARTICLES

Related Articles

TRENDING ARTICLES