Saturday, November 2, 2024

ಬಿಜೆಪಿ ಪಕ್ಷ ಬುರುಡೆ ಪಕ್ಷ : ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿ ಪಕ್ಷ ಬುರುಡೆ ಪಕ್ಷ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೂದಲಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಬಿಜೆಪಿಯವರು ಪ್ರಶ್ನೆ ಮಾಡುವ, ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.

ನಮ್ಮ ಸರ್ಕಾರ ಬಂದು 45 ದಿನವಾಗಿದೆ. ಈಗಾಗಲೇ ಗ್ಯಾರಂಟಿ ಬಗ್ಗೆ ಸಾರ್ವಜನಿಕರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಹಿಂದೆ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಬಿಜೆಪಿ ಪಕ್ಷ ಬುರುಡೆ ಪಕ್ಷ ಎಂದು ಜರಿದರು.

ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ನೀವು ವಿಪಕ್ಷದಲ್ಲಿ ಇದ್ದು ನಮ್ಮ ತಪ್ಪುಗಳನ್ನು ಗಮನಿಸಿ. ಸದನ ನಡೆಯದಂತೆ ಪ್ರತಿಭಟನೆ ಮಾಡೋದು ಸರಿಯಲ್ಲ ಎಂದು ಕುಟುಕಿದರು.

ಇದನ್ನೂ ಓದಿ : ಕೇಂದ್ರ ಕರ್ನಾಟಕದ ವಿರೋಧಿಯಾಗಿ ನಡೆದುಕೊಳ್ತಿಲ್ಲ : ಮೋದಿ ಪರ ಪ್ರಜ್ವಲ್ ಬ್ಯಾಟಿಂಗ್

ಅನುಚಿತ ವರ್ತನೆ ಸರಿಯಲ್ಲ

ಸದನದ ಬಾವಿಗಿಳಿದು ಬಿಜೆಪಿ ಸದಸ್ಯರು ಧರಣಿಗಿಳಿದರು. ಈ ವೇಳೆ ಸ್ಪೀಕರ್, ನಿಮ್ಮ ಅನುಚಿತ ವರ್ತನೆ ಜನರು ನೋಡ್ತಿದ್ದಾರೆ. ಶಾಸಕರ ಪ್ರಶ್ನಾವಳಿಗೆ ಅವಕಾಶ ಕೊಡಿ. ಶಾಸಕರು ಪ್ರಶ್ನೆ ಕೇಳಿದ್ದಾರೆ, ಮಂತ್ರಿಗಳು ಉತ್ತರ ಕೊಡ್ತಿದ್ದಾರೆ. ಎಲ್ಲರೂ ಆಸನಕ್ಕೆ ವಾಪಸ್ ಬನ್ನಿ. ನಿಮ್ಮ ಅನುಚಿತ ವರ್ತನೆ ಸರಿಯಲ್ಲ ಎಂದು ಹೇಳಿದರು.

ಅವ್ರು ಪ್ರತಿಭಟನೆ ಮಾಡಲಿ

ಬಿಜೆಪಿ ಪ್ರತಿಭಟನೆ ವಿಚಾರ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಬಿಜೆಪಿಯವರು ಸದನದ ಒಳಗೂ, ಹೊರಗೂ ಎಲ್ಲಾ ಕಡೆ ಪ್ರೊಟೆಸ್ಟ್ ಮಾಡಲಿ. ಅವರ ಪ್ರತಿಭಟನೆಯಿಂದ ನಮ್ಮ ಗ್ಯಾರಂಟಿಗಳಿಗೆ ಒಳ್ಳೆಯ ಪ್ರಚಾರ ಸಿಗುತ್ತಿದೆ. ಅವರು ಪ್ರತಿಭಟನೆ ಮಾಡಲಿ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES