Sunday, January 19, 2025

ಕಲಬುರಗಿ ನಗರದಲ್ಲಿ ಯುವಕನಿಗೆ ಚಾಕು ಇರಿತ

ಕಲಬುರಗಿ : ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿ ಪರಾರಿಯಾದ ಘಟನೆ ನಗರದ ಇಕ್ಬಾಲ್‌ ಕಾಲೋನಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಇದನ್ನೂ ಓದಿ: ಇಂದಿನಿಂದ ಎಸ್​ಎಸ್​ಎಲ್​​ಸಿ ಪೂರಕಪರೀಕ್ಷೆ ಮರುಎಣಿಕೆಗೆ ಅರ್ಜಿ ಸಲ್ಲಿಕೆ ಆರಂಭ

22 ವರ್ಷದ ಮಹಮ್ಮದ್ ಹಸನ್‌ಗೆ ಚಾಕು ಇರಿತಕ್ಕೊಳಗಾದ ವ್ಯಕ್ತಿ, ಹೋಟೆಲ್‌ ಮುಂದೆ ಕೂತಿದ್ದಾಗ ಇರ್ಫಾನ್‌ ಮತ್ತು ಮುಬಿನ್‌ ಎಂಬ ಇಬ್ಬರು ಯುವಕರು ದಾಳಿ ನಡೆಸಿದ್ದಾರೆ. ಕೂಡಲೇ ಗಾಯಾಳು ಮಹಮ್ಮದ್‌ನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಚಾಕು ಇರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ್ದು ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES