Monday, December 23, 2024

ರೈತರ ನಿದ್ದೆಗೆಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ

ಚಾಮರಾಜನಗರ : ರೈತರ ನಿದ್ದೆಗೆಡಿಸಿ ಆತಂಕ ಸೃಷ್ಟಿಸಿದ್ದ ಚಿರತೆ, ಬೋನಿನಲ್ಲಿ ಸೆರೆಯಾಗಿದ್ದೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ : ಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವು

ಜಿಲ್ಲೆಯ ಅರಕಲವಾಡಿ ಗ್ರಾಮದ ಸುತ್ತಮುತ್ತಲು ಚಿರತೆ ಹಾವಳಿ ಹೆಚ್ಚಾಗಿತ್ತು, ಹಗಲು ವೇಳೆಯಲ್ಲೂ ರಾಜರೋಷವಾಗಿ ತಿರುಗುತ್ತಿದ್ದ ಚಿರತೆ ಗ್ರಾಮದಲ್ಲಿನ ಜಾನುವಾರುಗಳು ಹಾಗೂ ನಾಯಿಗಳನ್ನು ಹಿಡಿದು ಕೊಂದು ತಿನ್ನುತ್ತಿತ್ತು, ಇದರಿಂದ ಆತಂಕಗೊಂಡಿದ್ದ ಗ್ರಾಮಸ್ಥರು ಜಮೀನುಗಳತ್ತ ತೆರಳದೇ ಜಾನುವಾರುಗಳನ್ನು ಕಾಡಿಗೆ ಬಿಡದೇ ಭಯಬೀತರಾಗಿದ್ದರು.

ಚಿರತೆ ಉಪಟಳ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯಇಲಾಖೆಗೆ ದೂರು ನೀಡಿದ್ದರು. ದೂರಿನನ್ವಯ ಗ್ರಾಮದ ಹೊರವಲಯದ ಕರಿಕಲ್ಲು ಕೋರೆಗಳಲ್ಲಿ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

RELATED ARTICLES

Related Articles

TRENDING ARTICLES